ಉತ್ತರ ಕರ್ನಾಟಕ ನೆರವಿಗೆ ಕಿಚ್ಚು, ದಚ್ಚು

ಉತ್ತರ ಕರ್ನಾಟಕ ನೆರವಿಗೆ ಕಿಚ್ಚು, ದಚ್ಚು

ಬೆಂಗಳೂರು, ಆ.8 : ಉತ್ತರ ಕರ್ನಾಟಕದಲ್ಲಿ ಆಗುತ್ತಿರುವ ಭಾರಿ ಮಳೆಗೆ ಜನ ತತ್ತರಿಸಿದ್ದಾರೆ. ಮೇಘರಾಯ ಆರ್ಭಟ ಜೋರಾಗಿದೆ. ಹಿನ್ನೆಲೆಯಲ್ಲಿ ಜಲಪ್ರಳಯಕ್ಕೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿದ್ದು, ಉತ್ತರ ಕರ್ನಾಟಕ ಮಂದಿಯ ನೆರವಿಗೆ ಧಾವಿಸಿರುವ ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿ, ಉತ್ತರ ಕರ್ನಾಟಕದಲ್ಲಿ ವರ್ಣನ ಆರ್ಭಟ ಇನ್ನೂ ನಿಂತಿಲ್ಲ. ಪ್ರವಾಹ ಉಂಟಾಗಿರುವ ಹಿನ್ನಲೆ ಫೋಟೊ ಮತ್ತು ವಿಡಿಯೋ ಮಾತ್ರ ನೋಡುತ್ತಿದ್ದೇವೆ. ಏನಾಗಿದೆ ಎಂದು ಗೊತ್ತಾಗುತ್ತಿಲ್ಲ. ನಮ್ಮ ಜನರು ಎಲ್ಲಿದ್ದಾರೆ? ಹೇಗಿದ್ದಾರೆ? ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಏನಾದರೂ ಸಹಾಯ ಮಾಡಬೇಕಿದೆ. ಹೀಗಾಗಿ ನನ್ನ ಸ್ನೇಹ ಬಳಗಕ್ಕೆ ಒಂದು ವಿನಂತಿ ಮಾಡಿಕೊಳ್ಳುತ್ತೇನೆ. ನೀವು ತಪ್ಪು ತಿಳಿದುಕೊಳ್ಳಬೇಡಿ, ಬೇಗ ತಲುಪಬಹುದಾದಂತಹ ಪಕ್ಕದಲ್ಲಿರುವ ಪ್ರವಾಹ ಪೀಡಿತ ಸ್ಥಳಗಳಿಗೆ ಭೀಟಿ ನೀಡಿ, ಅಲ್ಲಿ ಏನು ಬೇಕು? ಯಾವ ಸಹಕಾರ ಬೇಕು? ತಕ್ಷಣ ಏನು ಮಾಡಬಹುದು ಎಂಬುದನ್ನು ತಿಳಿದು ನನಗೂ ಮಾಹಿತಿ ನೀಡಿ ಒಟ್ಟಿಗೆ ಸೇರಿ ನೆರವು ನೀಡೋಣ ಎಂದು ಮನವಿ ಮಾಡಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos