ಕಂಟಕ್ಟರ್ ಬ್ಯಾಗ್ ಕದ್ದ ಖದೀಮ, ಬಿತ್ತು ಗೂಸಾ

ಕಂಟಕ್ಟರ್ ಬ್ಯಾಗ್ ಕದ್ದ ಖದೀಮ, ಬಿತ್ತು ಗೂಸಾ

ಬೆಂಗಳೂರು, ಆ.05: ಕೆ ಎಸ್ ಆರ್ ಟಿ ಸಿ ಬಸ್ ನ ಲೇಡಿ ಕಂಡಕ್ಟರ್ ನ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಖದೀಮನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಆನೇಕಲ್ ನಲ್ಲಿ ನಡೆದಿದೆ.

ಬೆಂಗಳೂರು ಹೊರವಲಯ ಆನೇಕಲ್ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಆನೇಕಲ್ ಬಸ್ ನಿಲ್ದಾಣದಿಂದ ಬೆಂಗಳೂರು ಕಡೆಗೆ ತೆರಳಲು ಸಿದ್ಧವಾಗಿದ್ದ ಕೆ ಎಸ್ ಆರ್ ಟಿ ಸಿ ಎಕ್ಸ್ಪ್ರೆಸ್ ಬಸ್ ನ ಲೇಡಿ ಕಂಡಕ್ಟರ್ ಬಸ್ ನಿಲ್ದಾಣದ ಕಚೇರಿಗೆ ಹೋಗಿ ಎಂಟ್ರಿ ಮಾಡಿಸಿಕೊಳ್ಳಲು ಹೋಗಿದ್ದರು.

ಈ ಸಂದರ್ಭದಲ್ಲಿ ಬಸ್ ನಲ್ಲಿ ಇಟ್ಟಿದ್ದ ಬ್ಯಾಗ್ ಅನ್ನು ಗಮನಿಸಿದ ಕಳ್ಳ ಖದೀಮನೊಬ್ಬ ಬ್ಯಾಗ್ ಕದ್ದು ಪರಾರಿಯಾಗುವಾಗ ಲೇಡಿ ಕಂಡಕ್ಟರ್ ಗಮನಿಸಿ ಅವನನ್ನು ಹಿಂಬಾಲಿಸಿ ಹಿಡಿದಿದ್ದಾರೆ. ಕಂಡಕ್ಟರ್ ಹಾಗೂ ಸ್ಥಳೀಯರು ಸೇರಿ ಹಿಗ್ಗಾಮುಗ್ಗಾ ಥಳಿಸಿ ಕಪಾಳ ಮೋಕ್ಷ ಮಾಡಿದ್ದಾರೆ, ಇನ್ನು ಬ್ಯಾಗ್ ನಲ್ಲಿ ಮೊಬೈಲ್ ಫೋನ್ ಸೇರಿದಂತೆ ಬೆಲೆ ಬಾಳುವ ವಸ್ತುಗಳಿದ್ದವು ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos