ಒತ್ತಡಕ್ಕೆ ನೋವಿಗೆ ಮನೆ ಮದ್ದು

ಒತ್ತಡಕ್ಕೆ ನೋವಿಗೆ ಮನೆ ಮದ್ದು

ಬೆಂಗಳೂರು, ಆ.5 : ಮಾನಸಿಕ ಒತ್ತಡ ಹೆಚ್ಚಾದಾಗ ತಲೆನೋವು ಕಾಡುವುದು. ತಲೆನೋವಿಗೆ ಮಾತ್ರೆಗಳನ್ನು ನುಂಗುವುದರಿಂದ ಅಡ್ಡಪರಿಣಾಮ ಉಂಟಾಗುವುದು. ಆದ್ದರಿಂದ ಇಂಥ ತಲೆ ನೋವಿಗೆ ಮನೆ ಮದ್ದು ಪರಿಣಾಮ ಕಾರಿ. ಇಲ್ಲಿ ಟೆನ್ಷನ್ನಿಂದ ಬರುವ ತಲೆನೋವು ಕಡಿಮೆ ಮಾಡಲು ಕೆಲ ಮನೆಮದ್ದು ಬಗ್ಗೆ ಹೇಳಲಾಗಿದೆ ನೋಡಿ:

ತಲೆನೋವಿಗೆ ಲೋಳೆಸರ : ವಿಪರೀತ ಟೆನ್ಷನ್ನಿಂದಾಗಿ ತಲೆ ನೋವು ಕಾಡುತ್ತಿದ್ದರೆ ಲೋಳೆಸರ ತಲೆನೋವು ಕಡಿಮೆ ಮಾಡುವಲ್ಲಿ ತುಂಬಾ ಪ್ರಯೋಜನಕಾರಿ. ಲೋಳೆಸರ ಜ್ಯೂಸ್ ಟೆನ್ಷನ್ ತಲೆನೋವು ಕಡಿಮೆ ಮಾಡುವಲ್ಲಿ ಪ್ರಯೋಜನಕಾರಿ.ಲೋಳೆಸರ ಜ್ಯೂಸ್ ಇಷ್ಟವಾಗದಿದ್ದರೆ ಸ್ವಲ್ಪ ತಾಜಾ ಲೋಳೆಸರವನ್ನು ಕಿತ್ತಳೆ ಜ್ಯೂಸ್ ಜತೆ ಹಾಕಿ ಕುಡಿಯಬಹುದು.ರಕ್ತದೊತ್ತಡ ಕಡಿಮೆ ಮಾಡುವ ಆಲೂಗಡ್ಡೆ ಮತ್ತು ಸಾಸಿವೆ ಎಣ್ಣೆ ಒಂದು ಆಲೂಗಡ್ಡೆಯನ್ನು ಬೇಯಿಸಿ, ಅದಕ್ಕೆ ಸ್ವಲ್ಪ ಸಾಸಿವೆ ಎಣ್ಣೆ ಹಾಕಿ ತಿನ್ನುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.ಒಂದು ಆಲೂಗಡ್ಡೆಯಲ್ಲಿ 1,050 ಮಿ.ಗ್ರಾಂ ಪೊಟಾಷ್ಯಿಯಂ ಇದ್ದು ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ಇನ್ನು ಸಾಸಿವೆಯೆಣ್ಣೆ ಸ್ನಾಯುಗಳನ್ನು ರಿಲ್ಯಾಕ್ಸ್ ಮಾಡುತ್ತದೆ.ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ ಬಿಸಿಲು ಮೈ ಮೇಲೆ ಬೀಳುವುದೇ ಕಮ್ಮಿ, ಇದರಿಂದ ನೈಸರ್ಗಿಕವಾಗಿ ದೊರೆಯಬೇಕಾದ ವಿಟಮಿನ್ ಡಿ ಕೊರತೆ ಉಂಟಾಗುವುದು. ವಿಟಮಿನ್ ಡಿ 3 ಕಡಿಮೆಯಾದರೆ ಮೂಳೆ ನೋವು, ಸಂಧಿವಾತ, ಬೆನ್ನು ನೋವು ಮುಂತಾದ ಸಮಸ್ಯೆ ಪ್ರಾರಂಭವಾಗುವುದು.ಈ ರೀತಿ ಸಮಸ್ಯೆ ಬರದಂತೆ ತಡೆಯಲು ಪ್ರತಿದಿನ ಬೆಳಗ್ಗೆ ಬಿಸಿಲಿನಲ್ಲಿ ನಿಲ್ಲುವುದು ಒಳ್ಳೆಯದು

ಫ್ರೆಶ್ ನ್ಯೂಸ್

Latest Posts

Featured Videos