ವಂದೇಮಾತರಂ ಗೀತೆಯಿಂದ ಬ್ರಿಟಿಷರಲ್ಲಿ ನಡುಕು

ವಂದೇಮಾತರಂ ಗೀತೆಯಿಂದ ಬ್ರಿಟಿಷರಲ್ಲಿ ನಡುಕು

ಬೆಂಗಳೂರು, ಜು. 29 :  ”ಸ್ವಾತಂತ್ರ್ಯ ಹೋರಾಟದ ವೇಳೆ ವಂದೇಮಾತರಂ ಗೀತೆ ಬ್ರಿಟಿಷರಲ್ಲಿ ನಡುಕು ಹುಟ್ಟಿಸಿತ್ತು ಎಂದು ರಾಜ್ಯಸಭೆ ಮಾಜಿ ಸದಸ್ಯ ತರುಣ್ ವಿಜಯ್ ಹೇಳಿದರು.

ನಗರದ ಅದಮ್ಯ ಚೇತನ ಸಂಸ್ಥೆಯಲ್ಲಿ ರಾಮಕೃಷ್ಣ ಮಠ ಹಾಗೂ ಸ್ವದೇಶಿ ಸಂಘದಿಂದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ 118ನೇ ಜಯಂತಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯತೆ ಮತ್ತು ರಾಷ್ಟ್ರೀಯವಾದಿ ಶಕ್ತಿಗಳ ಹೋರಾಟ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಶ್ರೀರಾಮ್ ಘೋಷಣೆ ನಕಲಿ ದೇಶ ಭಕ್ತರು, ನಕಲಿ ಜಾತ್ಯತೀತವಾದಿಗಳು ಹಾಗೂ ದೇಶದ್ರೋಹಿಗಳ ಎದೆಯಲ್ಲಿ ಭೀತಿ ಹುಟ್ಟಿಸಿದೆ,” ಎಂದರು. ”ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ರಾಷ್ಟ್ರೀಯತೆಯ ವಿಷಯದಲ್ಲಿ ಎಂದೂ ರಾಜಿಯಾಗದ ರಾಷ್ಟ್ರೀಯ ನಾಯಕರಾಗಿದ್ದರು. ನೆಹರೂ ಸಂಪುಟದಲ್ಲಿ ಸಚಿವರಾಗಿದ್ದಾಗ ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯನ್ನು ವಿರೋಧಿಸಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಜನಸಂಘವನ್ನು ಸ್ಥಾಪಿಸಿದರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಮೂಲ ಮಂತ್ರವನ್ನು ಮುಖರ್ಜಿ ಅವರು ನಮಗೆ ನೀಡಿದ್ದಾರೆ,” ಎಂದು ಹೇಳಿದರು

ಫ್ರೆಶ್ ನ್ಯೂಸ್

Latest Posts

Featured Videos