ವಿಶ್ವಾಸಮತ ಗೆದ್ದ ಯಡಿಯೂರಪ್ಪ

ವಿಶ್ವಾಸಮತ ಗೆದ್ದ ಯಡಿಯೂರಪ್ಪ

ಬೆಂಗಳೂರು, ಜು.29 :  ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಸದನದಲ್ಲಿ ಬಹುಮತ ಸಾಬೀತುಪಡಿಸಿದರು.
ವಿಶ್ವಾಸಮತ ಯಾಚನೆ ಪ್ರಸ್ತಾಪವನ್ನು ಯಡಿಯೂರಪ್ಪ ಅವರು ಸದನದಲ್ಲಿ ಮಂಡಿಸಿದರು. ಈ ಪ್ರಸ್ತಾಪವನ್ನು ಸದನದ ಮುಂದಿಟ್ಟ ಸ್ಪೀಕರ್? ರಮೇಶ್?? ಕುಮಾರ್? ಧ್ವನಿಮತದ ಮೂಲಕ ವಿಶ್ವಾಸ ಮತ ಕೇಳಿದರು. ಧ್ವನಿಮತದಲ್ಲಿ ಸದನದ ವಿಶ್ವಾಸವನ್ನು ಯಡಿಯೂರಪ್ಪ ಗೆದ್ದರು.
೧೭ ಶಾಸಕರ ಅನರ್ಹತೆ ಬಳಿಕ ಸದನದ ಸಂಖ್ಯಾಬಲ ೨೦೭ ಕ್ಕೆ ಕುಸಿದಿತ್ತು. ಈ ಸಂದರ್ಭದಲ್ಲಿ ಸರ್ಕಾರ ರಚನೆಗೆ ೧೦೪ ಮ್ಯಾಜಿಕ್?? ನಂಬರ್? ಅವಶ್ಯಕವಾಗಿದ್ದು, ೧೦೬ ಶಾಸಕರ ಬೆಂಬಲ ಹೊಂದಿದ್ದ ಬಿಜೆಪಿ ವಿಶ್ವಾಸ ಮತದಲ್ಲಿ ಗೆಲುವು ಕಂಡಿತು.
೩,೩೨೭ ಕೋಟಿ ರೂ. ಪೂರಕ ಬಜೆಟ್?ಗೆ ಅಂಗೀಕಾರ
ವಿಶ್ವಾಸ ಮಂಡನೆ ಬಳಿಕ ಮೂರು ತಿಂಗಳಿಗೆ ಯಡಿಯೂರಪ್ಪ ಲೇಖನುದಾನ ಮಂಡಿಸಿದರು. ಕೇವಲ ಮೂರು ತಿಂಗಳಿಗೆ ಲೇಖನುದಾನ ವಿಧೇಯಕಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದವು. ಬಳಿಕ ಸದನವು ಹಣಕಾಸು ವಿಧೇಯಕಕ್ಕೆ ಅನುಮೋದನೆ ನೀಡಿತು.

ಫ್ರೆಶ್ ನ್ಯೂಸ್

Latest Posts

Featured Videos