ಕೋಟಿ ಕೋಟಿ ಸಂಬಳ ಬಿಟ್ಟು ಕೃಷಿಗೆ ಎಂಟ್ರಿ ಕೊಟ್ಟ ದಂಪತಿ

ಕೋಟಿ ಕೋಟಿ ಸಂಬಳ ಬಿಟ್ಟು ಕೃಷಿಗೆ ಎಂಟ್ರಿ ಕೊಟ್ಟ ದಂಪತಿ

ಅಹಮದಾಬಾದ್. ಜು.29 : ಕೆಲವರ ಕನಸುಗಳು ನಿಜಕ್ಕೂ ನಮ್ಮನ್ನು ದಂಗು ಬಡಿಸುವಂತಿರುತ್ತವೆ.. ಪರಿಸರ ಸಂರಕ್ಷಣೆ ಕನಸು ಕಂಡಿದ್ದ ಅವರೀಗ ಅಮೆರಿಕಾ ಬಿಟ್ಟು ಭಾರತಕ್ಕೆ ಮರಳಿದ್ದಾರೆ. ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿ ಐಷಾರಾಮಿ ಬಂಗಲೆಯಲ್ಲಿ ವಾಸವಾಗಿದ್ದ ಇವರಿಬ್ಬರು ಕೋಟಿ ಕೋಟಿ ಲೆಕ್ಕದಲ್ಲಿ ಸಂಬಳವನ್ನು ಜೇಬಿಗಿಳಿಸುತ್ತಿದ್ದರು. ಮತ್ತೀಗ ತಮ್ಮ ತವರು ಗುಜರಾತಿಗೆ ಮರಳಿದ್ದು ಕೈಗೆ ಕೆಸರು ಮೆತ್ತಿಕೊಂಡು ಹೊಲಗದ್ದೆಗಳಲ್ಲಿ ದುಡಿಯುತ್ತಿದ್ದಾರೆ. ನಡಿಯಾದ್ ನಗರದಲ್ಲಿ 10 ಎಕರೆ ಜಮೀನನ್ನು ಖರೀದಿಸಿರುವ ವಿವೇಕ್ ಶಾ ಮತ್ತು ವೃಂದಾ ಅಲ್ಲಿ ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ. ಅವರಿಬ್ಬರು ಕೆಲ ವರ್ಷದ ಹಿಂದೆ ಸಿಲಿಕಾನ್ ಸಿಟಿಯಲ್ಲಿ ಟೆಕ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಸಮಾನ ಮನಸ್ಕರಾದ ಅವರ ಚಿತ್ತ ಸದಾ ಕೃಷಿಯ ಕಡೆ ತುಡಿಯುತ್ತಿತ್ತು. ಹೀಗಾಗಿ ಭಾರತಕ್ಕೆ ಮರಳಲು ನಿರ್ಧರಿಸಿದರು.

ತಮ್ಮನ್ನು ತಾವು ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮುನ್ನ ಅವರಿಬ್ಬರು ಕೃಷಿಗೆ ಸಂಬಂಧಿಸಿದಂತೆ ಒಂದುವರೆ ತಿಂಗಳ ಕೋರ್ಸ್ ಓದಿದ್ದಾರೆ. ಬಳಿಕ ಪರಿಸರಕ್ಕೆ ಪೂರಕವಾದ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos