ಪೀಣ್ಯದಾಸರಹಳ್ಳಿ, ಜು. 29 : ‘ಸಂಸ್ಕೃತಿ, ಸಂಸ್ಕಾರ, ಪ್ರೀತಿ ಇವುಗಳು ಸಮಾಜಕ್ಕೆ ಆಧಾರ ಸ್ತಂಭಗಳು. ವಿಶ್ವಾಸವಿಲ್ಲದ ಯಾವ ವ್ಯಕ್ತಿಯೂ ಜೀವಿಸುವುದು ಕಷ್ಟ. ಆಚಾರ ವಿಚಾರತುಳುನಾಡಿನ ಜನತೆಯ ನಾಡಿಮಿಡಿತವಾಗಿದ್ದು, ನೀವು ಎಲ್ಲಿಗೆ ಹೋದರೂ ಸಂಸ್ಕಾರ, ಸಂಸ್ಕೃತಿಯನ್ನು ಮರೆಯಬೇಡಿ’ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.
ದಾಸರಹಳ್ಳಿ ಎಂಟನೇಮೈಲಿಯಲ್ಲಿರುವ ಪಾಟೀದಾರ್ ಸಮಾಜ ಭವನದಲ್ಲಿ ಪವರ್ ಪ್ರೆಂಡ್ಸ್ ಬೆಂಗಳೂರು ವತಿಯಿಂದ ಆಯೋಜಿಸಲಾದ ಕೊಡಗಿನ ನಿರಾಶ್ರಿತರಿಗೆ ಧನಸಹಾಯ ಹಾಗೂ ಮಹಿಳಾ ಸಾಧಕಿಯರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಾನು ಹುಟ್ಟಿದ ಊರು ಒಂದು ಸಣ್ಣ ಕುಗ್ರಾಮ. ನನ್ನ ಪುಣ್ಯ ಭೂಮಿಯ ಶಕ್ತಿ ನನ್ನನ್ನು ದೆಹಲಿವರೆಗೂ ಹೋಗುವಂತೆ ಮಾಡಿದೆ. ಪಶ್ಚಿಮ ಘಟ್ಟದ ಪ್ರಶಾಂತವಾದ ನಾಡುತುಳುನಾಡು, ಇಡೀ ದೇಶದ ಎಂಟು ಬಂದರುಗಳಲ್ಲಿ ನಮ್ಮ ಕರಾವಳಿಯು ಒಂದು ಎಂದ ಅವರು ಯಕ್ಷಗಾನ, ಬಯಲಾಟ, ಜಾನಪದ, ಸಿನಿಮಾರಂಗದಿಂದ ಹಿಡಿದು ಭೂಗತಜಗತ್ತಿನಲ್ಲಿ ಇರುವವರು ಕರಾವಳಿಯವರೆ’ ಎಂದು ಹಾಸ್ಯ ಚಾಟಕಿ ಹಾರಿಸಿದರು.
ನಟ ವಿಜಯರಾಘವೇಂದ್ರ
ನಟ ವಿಜಯರಾಘವೇಂದ್ರ ಮಾತನಾಡಿ ‘ಕರಾವಳಿಯ ಸಂಸ್ಕೃತಿ ಬಹಳ ಮಹತ್ವವಾಗಿದ್ದು, ಜನರ ಕಷ್ಟಗಳಿಗೆ ಸ್ಪಂದಿಸುವ ಈ ಸಂಸ್ಥೆ ಇತರರಿಗೂ ಮಾದರಿಯಾಗಲಿ’ಎಂದುಶುಭ ಕೋರಿದರು .
ಕಾರ್ಯಕ್ರಮದಲ್ಲಿ ಪ್ರಕೃತಿ ವಿಕೋದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ತಲಾ 50 ಸಾವಿರದಂತೆ 10ಲಕ್ಷ ರೂಪಾಯಿಗಳ ಚಕ್ ಗಳ ವಿರತಣೆ, ಮಹಿಳಾ ಸಾಧಕರಿಗೆಸನ್ಮಾನ, ಆಹಾರ ಮೇಳ, ತುಳು ನಗೆ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಮಾರಂಭವನ್ನು ಕೇಂದ್ರ ಸಚಿವ ಡಿವಿ ಸದಾನಂದಗೌಡ ಉದ್ಘಾಟಿಸಿದರು, ನಟ ವಿಜಯರಾಘವೇಂದ್ರ, ಸಂಸ್ಥೆಯ ಅದ್ಯಕ್ಷ ಶಿವಾನಂದ ಸಾಲ್ಯಾನ್, ಎಸಿಇ ಸಂಸ್ಥೆಯ ವ್ಯವಸ್ಥಾಪಕನಿರ್ದೇಶಕ ರಾಮದಾಸ್ ಪುತ್ತಿಗೆ, ಉದ್ಯಮಿ ಸುಂದರ್ ಕೋಟ್ಯಾನ್, ಬಿ.ಎಂ ಉದಯಕುಮಾರ್ ಇದ್ದರು.