ಫ್ರೀಡಂ ಪಾರ್ಕ್ ನ ಹೊಸ ರೂಪ

ಫ್ರೀಡಂ ಪಾರ್ಕ್ ನ ಹೊಸ ರೂಪ

 

ಬೆಂಗಳೂರು, ಜು. 27: ಫ್ರೀಡಂ ಪಾರ್ಕ್ ಇದು ಜನಪ್ರಿಯ ಸಾಂಸ್ಕೃತಿಕ ಮತ್ತು ಪ್ರತಿಭಟನಾ ಸ್ಥಳವಾಗಿದೆ  ಇದನ್ನು ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ವಹಿಸುತ ಇದೆ. ಇದು ಮೊದಲು ಕೇಂದ್ರ ಜೈಲ್ ಆಗಿತ್ತು. ನವೆಂಬರ್ 2008 ರಲ್ಲಿ ಇದನ್ನು ಸಾರ್ವಜನಿಕರಿಗೆ ತೆರೆಯಲಾಯಿತು. ಪ್ರತಿಭಟನೆಗಾಗಿ ಅದರ ಒಂದು ಭಾಗವನ್ನು ನಿಗದಿಪಡಿಸಲಾಗಿದೆ. 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಭಾರತದಲ್ಲಿ ಘೋಷಿಸಿದಾಗ, ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಈ ಸ್ಥಳದಲ್ಲಿ ಅಡ್ವಾಣಿಯವರನ್ನು ಬಂಧಿಸಲಾಯಿತು. ಲೋಕಪಾಲ್ ಮಸೂದೆಯನ್ನು ಜಾರಿಗೆ ತರಲು ಸರ್ಕಾರದ ಕ್ರಮಕ್ಕೆ ಅಣ್ಣಾ ಹಜಾರೆ ಅನಿರ್ದಿಷ್ಟ ಉಪವಾಸವನ್ನು ಬೆಂಬಲಿಸುವ ಇಂಡಿಯಾ ಅಗೆನೆಸ್ಟ್ ಕರಪ್ಷನ್  ಸಹ ಇಲ್ಲಿ ಆಯೋಜಿಸಲಾಗಿತ್ತು.

ಸ್ವಾತಂತ್ರ್ಯ ಹೋರಾಟಗಾರರು “ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಮಯದಲ್ಲಿ ಈ  ಜೈಲಿನಲ್ಲಿದ್ದರು ಎಂದು ಹೇಳಲಾಗುತ್ತದೆ. ಬ್ರಿಟಿಷ್ರ ಆಳ್ವಿಕೆಯಲ್ಲಿ ಸಮಯದಲ್ಲಿ ಜೈಲಿನಲ್ಲಿದ್ದ ಕೆಲವೇ ಜನರಲ್ಲಿ ಎಚ್ ಎಸ್ ದೋರೆಸ್ವಾಮಿ ಕೂಡ ಒಬ್ಬರು. ದೊರೆಸ್ವಾಮಿಯನ್ನು ಈ ಕಾರಗೃಹದಲ್ಲಿ ಎರಡು ಬಾರಿ ಬಂಧಿಸಲಾಗಿದೆ – ಮೊದಲ ಬಾರಿಗೆ, 1942-43ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ 14 ತಿಂಗಳು ಮತ್ತು ನಂತರ ತುರ್ತು ಸಮಯದಲ್ಲಿ ನಾಲ್ಕು ತಿಂಗಳು ಬಂಧಿಸಲಾಗಿತ್ತು. 1942 ರಲ್ಲಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕೆ ಹನುಮಂತಯ್ಯ, ಮಾಜಿ ಗೃಹ ಸಚಿವ ಎಂ ವಿ ರಾಮರಾವ್, ಮತ್ತು ಎಚ್ ವಿ ದಾಸಪ್ಪ, ಪಿ ಸುಬ್ರಮಣ್ಯ, ಎಚ್ ಸಿದ್ದಯ್ಯ ಸೇರಿದಂತೆ ಹಲವಾರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರನ್ನು ಈ  ಜೈಲಿಗೆ ಹಾಕಲಾಯಿತು.

ಜೈಲು ಸಂಕೀರ್ಣದ ಪ್ರತಿಯೊಂದು ಭಾಗವನ್ನು ಬಹಳ ಅರ್ಥ ಪೂರ್ಣವಾಗಿ ವಿವರಿಸಲಾಗಿದೆ. ಹಾಗೆ ನೋಡಬಹುದು ಕೂಡ. ಬ್ಯಾರಕ್ಗಳು, ಅಡಿಗೆಮನೆ, ಏಕಾಂತದ ಬಂಧನ ಪ್ರದೇಶ. ಇಗಳನ್ನು ಇಲ್ಲಿ ನೋಡಬಹುದು. ಬ್ರಿಟಿಷರ ಕಾಲದಲ್ಲಿ, ಜೈಲಿನೊಳಗೆ ಅಪರಾಧ ನಡೆದಾಗ ಮಾತ್ರ ಕೈದಿಗಳನ್ನು ಏಕಾಂತದ ಬಂಧನದಲ್ಲಿರಿಸಲಾಗುತ್ತಿತ್ತು ಜಗಳವಾಗಿದ್ದರೆ, ಅಥವಾ ಯಾರಾದರೂ ಅಧಿಕಾರಿಯನ್ನು ಅವಮಾನಿಸಿದರೆ, ಅವರನ್ನು ಒಂದು ವಾರದವರೆಗೆ ಏಕಾಂತದ ಬಂಧನದಲ್ಲಿರಿಸುತ್ತಿದ್ದರು. ಅವರನ್ನು ಗಂಟೆಗಳ ಕಾಲ ಸಂಕೋಲೆಗಳಲ್ಲಿ ನಿಲ್ಲಿಸಲಾಗುತ್ತಿತ್ತು.

ಇನ್ನು ಜೈಲಿನ ಒಳಗೆ ಹೋದರೆ ಮೊದಲಿಗೆ ಸಮಾನಾಂತರ ಗೋಡೆಗಳನ್ನು ನೋಡಬಹುದು. ಈ ಎರಡು ಗೋಡೆಗಳು ಸಮಾನಾಗಿದ್ದು, ನೋಡಲು ಆಕರ್ಷಣಿಯವಾಗಿದೆ. ನಂತರ ಮುಂದೆ ನಡೆದರೆ. ಸೆಂಟ್ರಲ್ ಟವರ್ ನೋಡಬಹುದು ಈ ವಾಚ್ ಟವರ್ ಮತ್ತು ಚೀಫ್ ವಾರ್ಡನ್‌ ಕಚೇರಿ ವಾಸಿಸುವ ಕೆಲವು ಅಂಶಗಳು ಆ ಸ್ಥಳದ ಐತಿಹಾಸಿಕ ಮೌಲ್ಯವನ್ನು ಅಮರಗೊಳಿಸುತ್ತ.

ಆಂಫಿಥಿಯೇಟರ್

ಹೊಸದಾಗಿ ಆಂಫಿಥಿಯೇಟರ್  ಸಣ್ಣ ರಂಗಮಂದಿರ ಮತ್ತು ಅದರ ಮೇಲೆ ಕೆಫೆ ಹೊಂದಿರುವ ಪುಸ್ತಕ ವಸ್ತು ಸಂಗ್ರಹಾಲಯವಾಗಿದೆ. ಈ ಟವರ್ ಮುಂದೆ ಒಬ್ಬ ಸೋಲ್ಜ್ ರ್ ಕೈಯಲ್ಲಿ ಬಂದೂಕನ್ನು ಹಿಡಿದು ನಿಂತಿರುವ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಹಾಗೆ ಮುಂದೆ ಹೋದರೆ ಗಲ್ಲುಶಿಕ್ಷೆಗೆ ಗುರಿಯಾದ ಖೈದಿಗಳನ್ನು ನೇಣು ಹಾಕುವ ಸ್ಥಳವನ್ನು ನೋಡಬಹುದು.

ಇದು ಭಯವನ್ನು ಉಂಟುಮಾಡುವಹಾಗಿದೆ, ಬ್ರಿಟಿಷರು ಇಲ್ಲಿ ನೂರಾರು ಜನರನ್ನು ಕೊಂದಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳು ಮಾತ್ರ ಬದಲಾಗಿವೆ ಆದರೆ ಹಿಂದಿನ ಹಲವಾರು ನೆನಪುಗಳನ್ನು  ಮಾತ್ರ ಹಾಗಾಗೆ ನೆನಪಿಸುತ್ತವೆ.

ಇನ್ನು ಈಗ ಫ್ರೀಡಂ ಪಾರ್ಕ್ ಗೆ ಹೊಸ ರೂಪವನ್ನು ನೀಡಲಾಗಿದೆ. ಪಾರ್ಕ್ ಗೆ ಬರುವಂತ ಸಾರ್ವಜನಿಕರಿಗೆ ರೀಲಿಫ್ ಗಾಗಿ ಪಾರ್ಕನ್ನು ನಿರ್ಮಾಣಮಾಡಲಾಗಿದೆ.  ಸರ್ಪಗಂಧಿ, ಶುಗರ್ ಗಿಡ, ಹೀಗೆ  ಹಲವಾರು ರೋಗನಿರೋಧಕ ಗಿಡಗಳನ್ನು ಬೆಳಸಲಾಗಿದೆ.  ಮೊಲ, ಬಾತುಕೋಳಿ, ಕೋಳಿ, ಮುಂತಾದ ಪಕ್ಷಿಗಳನ್ನು ಇಲ್ಲಿ ಸಾಕಲಾಗಿದೆ. ಹುಟ್ಟು ಹಬ್ಬಅಥವ ವಿವಹ  ವಾರ್ಷಿಕೋತವ ಸಂಧರ್ಭದಲ್ಲಿ ಈ ಪಾರ್ಕ್ನಲ್ಲಿ ಗಿಡ ನೆಡುವ ಮೂಲಕ ತಮ್ಮ ಸಂಭ್ರಮವನ್ನು ಹೆಚ್ಚಿಸಿಕೊಳ್ಳಬಹುದು. ಎಂದು ಅಲ್ಲಿನ ಜವಬ್ದಾರಿ ವಹಿಸಿಕೊಂಡಿರುವ ಸೋಮಶೇಖರ್ ಹೇಳ್ತಾರೆ ಕೇಳಿ.

ಸರ್ಕಾರ ಇನ್ನು ಹೆಚ್ಚಿನ  ಅನುದಾನವನ್ನು ನೀಡಿ ಫ್ರೀಡಂ ಪಾರ್ಕನ ಸಚ್ಚತೆಗೆ ಶ್ರಮಿಸಲಿ ಹಾಗೆ ಪ್ರವಾಸಿ ತಾಣವಾಗಿ ಮಾಡಲಿ ಎಂಬುದೆ ನಮ್ಮಆಶಯ.

ಫ್ರೆಶ್ ನ್ಯೂಸ್

Latest Posts

Featured Videos