ಟಯರ್ ಸ್ಫೋಟ: ಕೆರೆಗೆ ಬಿದ್ದ ಕಾರು

ಟಯರ್ ಸ್ಫೋಟ: ಕೆರೆಗೆ ಬಿದ್ದ ಕಾರು

ಬೆಂಗಳೂರ, ಜು. 26 : ಕಾರಿನ ಟಯರ್ ಸ್ಫೋಟಗೊಂಡು ಕಾರು ಕೆರೆಗೆ ಬಿದ್ದ ಪರಿಣಾಮ ಪತ್ನಿ ಸಾವನ್ನಪ್ಪಿ ಪತಿ ಗಂಭೀರ ಗಾಯಗೊಂಡಿರುವ ಘಟನೆ ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ಗುರುವಾರ ನಡೆದಿದೆ.

ಮೃತ ಮಹಿಳೆಯನ್ನು ಮಮತಾ(35) ಎಂದು ಗುರುತಿಸಲಾಗಿದೆ. ಪತಿ ಆನಂದ ಜತೆ ಹುಲಮಂಗಲದಿಂದ ಜಿಗಣಿ ಕಡೆ ಪ್ರಯಾಣಿಸಯತ್ತಿದ್ದಾಗ ಕಾರಿನ ಮುಂಭಾಗದ ಟಯರ್ ಸ್ಫೋಟಗೊಂಡಿದೆ.

ಕಾರು ನಿಯಂತ್ರಣ ಕಳೆದುಕೊಂಡ ಕೆರೆಗೆ ಬಿದ್ದಿದೆ. ಇದರಿಂದ ಮಮತಾ ಅವರು ಸಾವನ್ನಪ್ಪಿ,ಆನಂದ ಗಂಭೀರ ಗಾಯಗೊಂಡಿದ್ದಾರೆ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos