ಬೆಂಗಳೂರ, ಜು. 26 : ಸ್ಪೀಕರ್ ಹೊಡೆತಕ್ಕೆ ತತ್ತರಿಸಿಹೋಗಿರೋ ಮೂವರು ರೆಬೆಲ್ ಶಾಸಕರ ರಾಜಕೀಯ ಭವಿಷ್ಯಕ್ಕೇ ಕುತ್ತು ಬಂದಿದೆ. ಮುಂಬೈನಲ್ಲಿ ಇದ್ಕೊಂಡು ದೋಸ್ತಿಗೆ ಮಣ್ಣು ಮುಕ್ಕಿಸಿದವರ ಸ್ಥಿತಿ ಅಲ್ಲೂ ಇಲ್ಲ, ಇಲ್ಲೂ ಇಲ್ಲದಂತಾಗಿದೆ.
ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಕೆಪಿಜೆಪಿ ಶಾಸಕ ಆರ್ ಶಂಕರ್ ಗೆ ಸ್ಪೀಕರ್ ಅನರ್ಹತೆ ಅನ್ನೋ ಒಂದು ಚಡಿ ಏಟು ಕೊಟ್ಟಿದ್ದಾರೆ. ಮುಂದೆ ಸಿಗೋ ಮಂತ್ರಿಗಿರಿ ಇರಲಿ, ಈಗ ಬಂದೊದಗಿರೋ ವಿಪತ್ತನಿಂದ ಪಾರಾಗೋದು ಹೇಗೆ ಅನ್ನೋ ಟೆನ್ಶನ್ಗೆ ಬಿದ್ದಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಏನೋ ಮೂವರು ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಆದರೆ, ಕಾನೂನಿನಲ್ಲಿ ಅತೃಪ್ತರಿಗೆ ಹಾದಿಗಳಿವೆ. ನಿಯಮದ ಪ್ರಕಾರ ಐದು ವರ್ಷ ಸ್ಪರ್ಧೆಗೆ ನಿರ್ಬಂಧ ಹೇರುವಂತಿಲ್ಲ. ಯಾಕಂದರೆ, ಆರ್ಟಿಕಲ್ 191ರ ಪ್ರಕಾರ ಅನರ್ಹರು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಚುನಾವಣೆ ಸ್ಪರ್ಧೆಗೆ ನಿರ್ಬಂಧ ಹೇರಿದ್ದೇ ಆದಲ್ಲಿ ಆರ್ಟಿಕಲ್ 361ಬಿ ಉಲ್ಲಂಘಿಸಿದಂತಾಗುತ್ತೆ. ಹೀಗಾಗಿ ಮುಂಬರುವ ಉಪಚುನಾವಣೆಯಲ್ಲೇ ಈ ಮೂವರು ಶಾಸಕರು ಸ್ಪರ್ಧಿಸಬಹುದು. ಅಲ್ಲದೇ ಎಮ್ಎಲ್ಸಿಯಾಗಿಯೂ ಸಚಿವ ಸ್ಥಾನ ಅಲಂಕರಿಸಬಹುದು. ಒಂದು ವೇಳೆ ಇದೆಲ್ಲಾ ಆಗೋದೇ ಇಲ್ಲ ಅನ್ನೋ ಟೈಮ್ ಬಂದರೆ ಸುಪ್ರೀಂಕೋರ್ಟ್ ಕೋರ್ಟ್ನಲ್ಲೂ ಅನರ್ಹತೆಯನ್ನು ಪ್ರಶ್ನಿಸಬಹುದು.