ಇಂದು ಉಂಡುಹೋದ ಕೊಂಡು ಹೋದ ಸರ್ಕಾರ: ಶ್ರೀನಿವಾಸ್

ಇಂದು ಉಂಡುಹೋದ ಕೊಂಡು ಹೋದ ಸರ್ಕಾರ: ಶ್ರೀನಿವಾಸ್

ಉಡುಪಿ, ಜುಲೈ 13 : ರಾಜ್ಯದಲ್ಲಿ ಉಂಡೂ ಹೋದ ಕೊಂಡೂ ಹೋದ ಸರ್ಕಾರ ಇದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ವ್ಯಂಗ್ಯವಾಡಿದ್ದಾರೆ. ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಬಹುಮತ ಕಳೆದುಕೊಂಡಿದ್ದು ಖಚಿತವಾಗಿದೆ. ಬಹುಮತ ಇಲ್ಲದ ಪಕ್ಷವನ್ನು ಸದನದಲ್ಲಿ ಬಿಜೆಪಿ ಎದುರಿಸಬೇಕಾಗಿದೆ. ನೆಪಗಳನ್ನು ಹೇಳದೆ ಸಿಎಂ ಕುಮಾರಸ್ವಾಮಿ ತಕ್ಷಣ ರಾಜೀನಾಮೆ ನೀಡಬೇಕು ಎಂದು ಹೇಳಿದರು.
ಸುಪ್ರೀಂ ಕೋರ್ಟ್ ವ್ಯಾಪ್ತಿಯನ್ನು ಸ್ಪೀಕರ್ ಪ್ರಶ್ನಿಸಿದ್ದಾರೆ. ಯಡಿಯೂರಪ್ಪ ವಿಶ್ವಾಸಮತ ಸಂದರ್ಭದಲ್ಲಿ ವಿಪಕ್ಷವಾಗಿ ನಡುರಾತ್ರಿ ಕೋರ್ಟ್ ಮೆಟ್ಟಿಲೇರಿದ್ದರು. 48 ಗಂಟೆಯಲ್ಲಿ ಸಾಬೀತು ಮಾಡುವ ನಿರ್ದೇಶನ ಪಡೆದಿದ್ದರು. ಅಂದು ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿಲ್ವಾ. ಈಗ್ಯಾಕೆ ಸುಪ್ರೀಂ ಮಧ್ಯ ಪ್ರವೇಶಕ್ಕೆ ಆಕ್ಷೇಪ ಮಾಡ್ತೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos