ಚಿಂತಾಮಣಿ ಜೋಡಿ ರಸ್ತೆ ಯನ್ನ ನಿರ್ಮಿಸಲು ಆಗ್ರಹ

ಚಿಂತಾಮಣಿ ಜೋಡಿ ರಸ್ತೆ ಯನ್ನ ನಿರ್ಮಿಸಲು ಆಗ್ರಹ

ಚಿಂತಾಮಣಿ, ಜು. 8 : ನಗರದಿಂದ ಮುರುಗಮಲ್ಲ ಗ್ರಾಮದವರಿಗೆ ಜೋಡಿ ರಸ್ತೆಯನ್ನು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡ ಪರ ಸಂಘಟನೆಗಳ ಒಕ್ಕೂಟ ) ವತಿಯಿಂದ ನಗರದ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಲೋಕೋಪ ಇಲಾಖೆ ಕಚೇರಿ ಮುಂಭಾಗ ಇಂದು ಪ್ರತಿಭಟನೆ ನಡೆಸಿ  ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ರಾದ ಎನ್ .ಅಂಬರೀಶ್ ತಾಲ್ಲೂಕಿನಲ್ಲಿ ಆರು ಹೋಬಳಿಗಳನ್ನು ಹೊಂದಿದ್ದ ಮುರುಗಮಲ್ಲ ಗ್ರಾಮಕ್ಕೆ ನೂರಾರು ಹಳ್ಳಿಗಳಿಂದ ಕೂಡಿದ್ದು, ಹಾಗೂ ಪವಿತ್ರವಾದ ಯಾತ್ರಾ ಸ್ಥಳವಾಗಿದ್ದು, ಹಿಂದೂ ಮುಸಲ್ಮಾನರ ಭಾವೈಕ್ಯತೆಯ ದರ್ಗಾ ಹೊಂದಿದೆ.

ಮತ್ತು ಶ್ರೀ ಮುಕ್ತೇಶ್ವರ ದೇವಾಲಯ ಇದೇ ಪ್ರತಿನಿತ್ಯ ಹಲವಾರು ಜನರು ಚಿಂತಾಮಣಿ ನಗರದಿಂದ ಮುರುಗಮಲ್ಲ ಕಡೆಗೆ ಹೋಗಿ ಬರುತ್ತಾರೆ ಆದ್ದರಿಂದ ಚಿಂತಾಮಣಿ ನಗರದಿಂದ ಮುರುಗಮಲ್ಲ ಗ್ರಾಮದವರೆಗೆ ಜೋಡಿ ರಸ್ತೆಯನ್ನು ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಗಳನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದರು.  ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಕೆ.ಎಲ್.ಶ್ರೀನಿವಾಸ ಸೇರಿದಂತೆ ಹಲವಾರು ಪದಾಧಿಕಾರಿಗಳು ಭಾಗವಹಿಸಿದ್ದರು

 

ಫ್ರೆಶ್ ನ್ಯೂಸ್

Latest Posts

Featured Videos