ಬಾಂಬ್ ಸ್ಪೋಟಗೊಂಡು 3 ಸಾವು

ಬಾಂಬ್ ಸ್ಪೋಟಗೊಂಡು 3 ಸಾವು

ಭೋಪಾಲ್, ಜು. 2 : ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಹಿಮ್ಮತ್ ಪುರ್ ಪ್ರದೇಶದಲ್ಲಿ ಇಂದು ಸೇನಾ ಬಾಂಬ್ ಸ್ಫೋಟಗೊಂಡ ಪರಿಣಾಮ ಮಗು ಸೇರಿ ಒಂದೇ ಕುಟುಂಬದ 3 ಜನರು ಸಾವನ್ನಪ್ಪಿದ ಘಟನೆ ನಡೆದಿದೆ.

ಘಟನೆಯಲ್ಲಿ ಶ್ಯಾಮ್ ಜಾತವ್ (55), ಅವರ ಮಗಳು ಸುಖದೇವಿ (30) ಮತ್ತು 1 ವರ್ಷದ ಹೆಣ್ಣು ಮಗು ಸಾವನ್ನಪ್ಪಿದ್ದಾರೆ. ಅಲ್ಲದೆ ಮೃತರ 3 ಜನ ಸಂಬಂಧಿಕರು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮತ್ತು ವಿಧಿವಿಜ್ಞಾನ ತಜ್ಞರು ಘಟನಾ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಶಿವಪುರಿ ಎಎಸ್ಪಿ ಜಿಎಸ್ ಕನ್ವರ್ ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos