ಬೆಂಗಳೂರು, ಜು. 2: ಇಂದು ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯಲ್ಲಿ ಸಚಿವ ಕೆಜೆ ಜಾರ್ಜ್ ಅವರು, ರಾಜಿನಾಮೆಯಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಜನರ ಹಿತಕ್ಕಾಗಿ ಇರುವ ನಮ್ಮ ಸಮ್ಮಿಶ್ರ ಸರ್ಕಾರವಿದೆ, ರಾಜಿನಾಮೆ ಕೊಡುವುದು ಅವರ ವೈಯಕ್ತಿಕ ವಿಚಾರ ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರ ಇನ್ನೂ ಕೂಡ ಹಾಗೆ ಇದೆ, ಸಿಎಂ ಕೂಡ ಇದ್ದಾರೆ, ಸಿಎಲ್ ಪಿ ನಾಯಕರು ಹ್ಯಾಂಡಲ್ ಮಾಡುತ್ತಾರೆ ಯಾರೇ ರಾಜಿನಾಮೆ ಕೊಟ್ಟರು ಕೂಡ ಸರ್ಕಾರಕ್ಕೆ ಏನೂ ಹಾನಿಯಾಗಲ್ಲ ಎಂದು ತಿಳಿಸಿದ್ದಾರೆ.
ಐದು ವರ್ಷ ಸರ್ಕಾರವನ್ನ ನಾವೇ ನಡೆಸುತ್ತೇವೆ, ನಾವೇ ಕುಮಾರಸ್ವಾಮಿಯವರನ್ನ ಸಿಎಂ ಮಾಡಿದ್ದು ಕಾಂಗ್ರೆಸ್ ಐಕಮಾಂಡ್ ತೀರ್ಮಾನದಂತೆ ಸಿಎಂ ಆಗಿದ್ದಾರೆ, ಸರ್ಕಾರ ಬಂದು ಒಂದು ವರ್ಷದಿಂದ ಬರಿ ವದಂತಿಗಳು.
ಸಚಿವ ಜಾಜ್೯ ಹೇಳಿಕೆ ಸಚಿವ ಜಿಟಿ ದೇವೆಗೌಡ ಬಿಜೆಪಿ ಪರ ಬ್ಯಾಟಿಂಗ್ ವಿಚಾರ
ಯಡಿಯೂರಪ್ಪ ಹೇಳಿದನ್ನ ಜಿಟಿಡಿ ಪುನರ್ ಉಚ್ಚಾರ ಮಾಡಿದ್ದಾರೆ ಅವರ ಪಾರ್ಟಿ ಅಧ್ಯಕ್ಷರು ಹೇಳಿದ್ದಾರೆ.
ಡೆಲ್ಲಿಯಿಂದಲೇ ಎಲ್ಲವನ್ನ ಆಪರೇಟಿಂಗ್ ಮಾಡುತಿದ್ದಾರೆ ಯಾವುದೇ ಪ್ರಯತ್ನ ಮಾಡಿದರು ಸರ್ಕಾರಕ್ಕೆಯಾವುದೆ ತೊಂದರೆ ಯಾಗಲ್ಲ ಎಂದು ಸಚಿವ ಜಾರ್ಜ್ ಹೇಳಿದ್ದಾರೆ.