ಲಕ್ನೋ, ಜೂ. 29: ಪಾಪಿ ತಾಯಿಯೊಬ್ಬಳು 2 ತಿಂಗಳ ಕಂದಮ್ಮನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ. 2 ತಿಂಗಳ ಮಗು ಅನಾರೋಗ್ಯದಿಂದ ಬಳಲುತ್ತಿತ್ತು. ಅಷ್ಟೇ ಅಲ್ಲದೇ ಯಾವುದೇ ಚಿಕಿತ್ಸೆಗೂ ಮಗು ಸ್ಪಂದಿಸುತ್ತಿರಲಿಲ್ಲ. ಇದರಿಂದ ಆರೋಪಿ ತಾಯಿ ಖಿನ್ನತೆಗೆ ಒಳಗಾಗಿದ್ದಳು. ಮಗು ಸದಾ ಅನಾರೋಗ್ಯದಿಂದ ಇರುತ್ತದೆ ಎಂದು ನೊಂದು ಪಾಪಿ ತಾಯಿ ಎರಡು ತಿಂಗಳ ಕಂದಮ್ಮನಿಗೆ ಬೆಂಕಿ ಹಚ್ಚಿ ಕ್ರೂರವಾಗಿ ಹತ್ಯೆ ಮಾಡಿದ್ದಾಳೆ.
ಮಗು ಮೃತಪಟ್ಟ ಬಳಿಕ ಆರೋಪಿ ತಾಯಿ ಸಂಪೂರ್ಣ ಮನೆಗೆ ಬೆಂಕಿ ಹಚ್ಚಿದ್ದಾಳೆ. ಬಳಿಕ ಆಕೆಯ ಮನೆಯಿಂದ ಹೊರಗೆ ಬಂದು ನೆರೆಹೊರೆಯವರಿಗೆ ತಾನು ಮಾಡಿದ ಕೃತ್ಯದ ಬಗ್ಗೆ ತಿಳಿಸಿ ಅಲ್ಲಿಂದ ಪರಾರಿಯಾಗಿದ್ದಾಳೆ ಎಂದು ಎಸಿಪಿ ಮಧುಬನ್ ಸಿಂಗ್ ತಿಳಿಸಿದರು. ಮೃತ ಮಗುವಿನ ಶವವನ್ನು ವಶಪಡಿಸಿಕೊಂಡಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ಪರಾರಿಯಾಗಿದ್ದ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ.