ಬೆಂಗಳೂರು, ಜೂ. 29: ನೆಲಮಂಗಲ ತಾಲೂಕಿನ ಹುರುಳಿಹಳ್ಳಿಯಲ್ಲಿ ಇಂದು ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ.
ಜಮೀನು ವಿಚಾರವಾಗಿ ಪ್ರಾರಂಭವಾದ ಗಲಾಟೆ ತಾರಕಕ್ಕೇರಿದ ಪರಿಣಾಮ ವಕೀಲ ಲಕ್ಷ್ಮಣ್ ಹಾಗೂ ಅವರ ಸಹೋದರ
ಧನಂಜಯ್ ಮೇಲೆ ನಾಗರಾಜು, ಸೋಮಶೇಖರ್, ಮಂಜುನಾಥ್ರವರು ಗುಂಪು ಕಟ್ಟಿಕೊಂಡು ದೊಣ್ಣೆಯಿಂದ ಬಡಿದು ಹಲ್ಲೆ ಮಾಡಿದ್ದಾರೆಂದು ಲಕ್ಷ್ಮಣ್ ಹಾಗೂ ಧನಂಜಯ್ ಆರೋಪ ಮಾಡಿದ್ದಾರೆ. ಗಾಯಾಳುಗಳಾದ ಲಕ್ಷ್ಮಣ್ ಮತ್ತು ಧನಂಜಯ್ ರನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣವು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಚಿಕಿತ್ಸೆ ನಂತರ ಪೋಲಿಸರು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.