ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮತ್ತೊಬ್ಬ ಮಹಿಳೆಯ ಪ್ರವೇಶದೊಂದಿಗೆ ಕೇರಳದಾದ್ಯಂತ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಎಸ್. ಪಿ. ಮಂಜುಳಾ ಎಂಬಾಕೆಯೇ ಆ ಮಹಿಳೆ.
ಕೇರಳ ಮಹಿಳಾ ದಲಿತ ಫೆಡರೇಷನ್ ಪ್ರಧಾನ ಕಾರ್ಯದರ್ಶಿಯಾದ ಎಸ್.ಪಿ.ಮಂಜುಳಾ ಕೇವಲ 35 ವರ್ಷದವಳಾಗಿದ್ದು, ವೃದ್ಧ ಮಹಿಳೆಯಂತೆ ಕೂದಲು ಬೆಳ್ಳಗಿರುವಂತೆ ಮೇಕಪ್ ಮಾಡಿಕೊಂಡು, ದೇವಸ್ಥಾನ ಪ್ರವೇಶ ಮಾಡಿ, ನಂತರ ತನ್ನ ಪರಿಚಯವನ್ನು ಮಾಡಿಕೊಂಡಿದ್ದಾಳೆ.
ಪೂಜಾರಿಯೊಬ್ಬಳ ಮಗಳಾದ ಎಸ್.ಪಿ.ಮಂಜುಳಾ ಮೂಲದೇವಸ್ಥಾನದ ಪ್ರವೇಶದಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.