ಬೆಂಗಳೂರು, ಜೂ. 20 : ಆಕ್ರಮ ಆಸ್ತಿ ಪ್ರಕರಣದಲ್ಲಿ ಸಚಿವ ಡಿ.ಕೆ ಶಿವಕುಮಾರ್ ತಾಯಿಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಗೌರಮ್ಮ ಅವರಿಗೆ ಸಂಬಂಧಿಸಿದ ಅಸ್ತಿ ಮುಟ್ಟುಗೋಲಿಗೆ ಐಟಿ ಇಲಾಖೆಯ ಬೇನಾಮಿ ಸೆಲ್ ಶೋಕಾಸ್ ನೋಟಿಸ್ ನೀಡಿ, ದಿನಗೊಳಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು. ಇದೇ ವೇಳೆ ಇಲಾಖೆ ನೀಡಿರುವ ಶೋಕಾಸ್ ನೋಟಿಸ್‌ಗೆ ಸಂಬಂಧಪಟ್ಟಂತೆ ಗೌರಮ್ಮ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇಂದು ಅರ್ಜಿ ವಿಚಾರಣೆ ವೇಳೆಯಲ್ಲಿ ಗೌರಮ್ಮನವ ಪರ ವಕೀಲರು ಗೌರಮ್ಮ ಹಾಗೂ ಅವರ ಕುಟುಂಬವು ಸಾಕಷ್ಟು ಆಸ್ತಿಯನ್ನು ಮಾಡಿದೆ. ಇದಲ್ಲದೇ ಅವರು ಕೃಷಿಯಿಂದ ಸಾಕಷ್ಟು ಹಣವನ್ನು ಸಂಪಾದನೆ ಮಾಡಿರುವುದರಿಂದ ಜೊತೆಗೆ ಬೇನಾಮಿ ಆಸ್ತಿ ಕಾಯಿದೆಯನ್ನು 2016 ರಲ್ಲಿ ತಿದ್ದುಪಡಿ ಮಾಡಲಾಗಿದೆ. ಹೀಗಾಗಿ ಈಗ ಅವರ ವಿರುದ್ದ ದಾಖಲಾಗಿರುವ ದೂರು ಈಗ ಅನ್ವಯವಾಗುವುದಿಲ್ಲ ಅಂತ ನ್ಯಾಯಪೀಠದ ಮುಂದೆ ಮನವಿ ಮಾಡಿದರು. ಇದೇ ವೇಳೆ ನ್ಯಾಯಪೀಠ ಪ್ರತಿವಾದಿ ಐಟಿ ವಿಭಾಗಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.