ಮಹಿಳೆ ಸೀರೆಗೆ ಆಕಸ್ಮಿತ ತಗುಲಿದ ಬೆಂಕಿ

ಮಹಿಳೆ ಸೀರೆಗೆ ಆಕಸ್ಮಿತ ತಗುಲಿದ ಬೆಂಕಿ

ಹುಬ್ಬಳ್ಳಿ, ಜೂ. 20 : ದೇವಸ್ಥಾನಕ್ಕೆ ಹೋದ ಮಹಿಳೆಯೊರ್ವಳ ಸೀರೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಗಾಯಗೊಂಡಿರುವ ಘಟನೆ ವಿಶ್ವೇಶ್ವರನಗರದ ವಿಶ್ವನಾಥ ದೇವಸ್ಥಾನದಲ್ಲಿ ನಡೆದಿದೆ.

ದೇವಸ್ಥಾನದ ಮುಂದಿರುವ ದೇವರ ಕಟ್ಟೆಯಲ್ಲಿ ದೀಪ ಬೆಳಗಲು ಹೋದ ಸಂದರ್ಭದಲ್ಲಿ ಸೀರೆಯ ಸೆರಗಿಗೆ ಬೆಂಕಿ ತಗುಲಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮಹಿಳೆ ಕೂಗಾಡಿದ್ದಾಳೆ.‌ ಕೂಡಲೇ ಸ್ಥಳೀಯರು ದೌಡಾಯಿಸಿದ್ದು, ಬೆಂಕಿ ನಂದಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಸೀರೆಯು ಹೆಚ್ಚಿನ ಪ್ರಮಾಣದಲ್ಲಿ ಸುಟ್ಟಿದ್ದು, ಮಹಿಳೆಗೆ ಸ್ವಲ್ಪ ಪ್ರಮಾಣದ ಗಾಯಾಗಳಾಗಿವೆ ಎಂದು ಮೂಲಗಳಿಂದ ತಿಳಿದು ಬಂದಿದ್ದು ಘಟನೆ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos