ನವದೆಹಲಿ, ಜೂ. 20: ಮಂಡ್ಯ ಸಂಸದೆ ಸುಮಲತಾ ಅವರು ಇಂದು ಕೇಂದ್ರ ಸಚಿವರಾದ ಡಿವಿ ಸದಾನಂದಗೌಡ ಹಾಗೂ ಪ್ರಹ್ಲಾದ್ ಜೋಷಿಯವರಿಗೆ,
ಮಂಡ್ಯ ಜಿಲ್ಲೆಯ ಜನರ ಜೀವನಾಡಿ ಕಾವೇರಿ, ಕಾವೇರಿಯ ಕೆಆರ್ ಎಸ್ ಅಣೆಕಟ್ಟೆಯಿಂದ ಮಂಡ್ಯ ರೈತರಿಗೆ ನೀರು ಹರಿಸಿ, ಸಕಾಲಕ್ಕೆ ಮಳೆ ಬಾರದೆ ಸಂಕಷ್ಟದಲ್ಲಿ ಇದ್ದಾರೆ. ಇಂತಹ ರೈತರ ಬೆಳೆಗಳಿಗೆ ನೀರು ಹರಿಸುವಂತೆ ಮನವಿ ಸಲ್ಲಿಸಿದ್ದಾರೆ.
ಇಂದು ನವದೆಹಲಿಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿವಿ ಸದಾನಂದಗೌಡ ಅವರನ್ನು ಭೇಟಿ ಮಾಡಿದ ಮಂಡ್ಯ ಸಂಸದೆ ಸಮುಲತಾ, ಮಂಡ್ಯ ರೈತರು ಕೆಆರ್ ಎಸ್ ನೀರು ಸರಿಯಾಗಿ ಹರಿಸದ ಕಾರಣ ಸಂಕಷ್ಟದಲ್ಲಿ ಇದ್ದಾರೆ. ಸಕಾಲಕ್ಕೆ ಮಳೆಯಾಗದ ಕಾರಣ, ರೈತರ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ. ಹೀಗಾಗಿ ಕೂಡಲೇ ಮಂಡ್ಯ ರೈತರಿಗೆ ಕೆಆರ್ ಎಸ್ ನಿಂದ ನೀರು ಹರಿಸುವಂತೆ ಮನವಿ ಮಾಡಿದರು.
ಇನ್ನೂ ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರನ್ನೂ ಭೇಟಿಮಾಡಿದ ಮಂಡ್ಯ ಸಂಸದೆ ಸುಮಲತಾ, ಮಂಡ್ಯ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಚರ್ಚೆ ನಡೆಸಿದರು. ಇವರಲ್ಲದೇ, ಯೂನಿಯನ್ ಮಿನಿಸ್ಟರ್ ಗಜೇಂದ್ರ ಸಿಂಗ್ ರನ್ನು ಭೇಟಿ ಮಾಡಿ ಮಂಡ್ಯದ ರೈತರ ಹಲವಾರು ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಮನವಿ ಮತ್ತು ಚರ್ಚೆಯನ್ನು ನಡೆಸಿದರು.