ವೈಟ್ ಪಿಲ್ಡ್ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ

ವೈಟ್ ಪಿಲ್ಡ್ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ

ಬೆಂಗಳೂರು, ಜೂ.19: ನಿನ್ನೆ  ರಾತ್ರಿ ನಗರದ  ವೈಟ್ ಪಿಲ್ಡ್ ಇನ್ನರ ಸರ್ಕಲ್ ಹಳೆ ಬಿಬಿಎಂಪಿ ಕಚೇರಿ ಬಳಿ ಇರುವು ಸಂಸ್ಕೃತಿ ಅಕಾಡೆಮಿಕ್ ಪಾಠ ಶಾಲೆ ಮುಖ್ಯ ರಸ್ತೆ ಬಳಿ ವಾಹನ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ತುಂಡಾಗಿ ನೆಲಕ್ಕೆ ಬಾಗಿದೆ. ರಾತ್ರಿ ಸುಮಾರು 11.30 ಸಮಯದಲ್ಲಿ ಈ ಘಟನೆ ನಡೆದಿದೆ ಇಂದೂ ಬೆಳಗೆ 9 ಗಂಟೆ ಸಮಯವಾದರು   ಅಧಿಕಾರಿಗಳಾಗಲ್ಲಿ ಅಥವಾ ಸಿಬ್ಬಂದಿ ವರ್ಗದ ವರಾಗಲ್ಲಿ ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ತೋರಿದ್ದಾರೆ.

ವಿದ್ಯುತ್ ನ ಸಹ ಸ್ಥಗಿತ ಗೊಳಿಸದೆ  ವಿದ್ಯುತ್ ಪೂರೈಕೆ ಎಂದಿನಂತೆ ಇದೆ .  ದಿನ ನಿತ್ಯ ನೂರಾರು ವಾಹನಗಳು ಪಾದಚಾರಿಗಳು ಶಾಲ ಮಕ್ಕಳು ಪೋಷಕರು ಒಡಾಡುವರು.

ಒಂದು ವೇಳೆ ಕಂಬ ನೆಲಕ್ಕೆ ಬಿದು ತಂತಿಗಳು ತುಂಡಾಗಿದರೆ ಬಾರಿ ಅನಾವುತ್ತವೆ ನಡೆಯುತ್ತಿತು.  ಘಟನೆ ನಡಿದ ಬಳಿಕ ಬೆಳಗಿನ ಜಾವ ಪಕ್ಕದಲ್ಲಿ ಇರುವ ಬೆಸ್ಕಾಂ ಕಛೇರಿಗೆ ಸ್ಥಳೀಯರು ಮತ್ತು ಶಾಲೆಯವರು ದೂರು ನೀಡಿದರು ಸ್ಥಳಕ್ಕೆ ಬಾರದೆ  ಅಧಿಕಾರಿಗಳು ಉಡಾಪೆ ಉತ್ತರ ನೀಡಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಬೆಸ್ಕಾಂ ಕಛೇರಿ ಅಧಿಕಾರಿಗಳಿಗೆ ಸ್ಥಳೀಯರು ಶಾಪ ಹಾಕುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos