ಜಿಂದಾಲ್: ಕನ್ನಡ ಅಭಿಮಾನದ ಸಂಕಲ್ಪ ಯಾತ್ರೆ ಚಾಲನೆ

ಜಿಂದಾಲ್: ಕನ್ನಡ ಅಭಿಮಾನದ ಸಂಕಲ್ಪ ಯಾತ್ರೆ ಚಾಲನೆ

ಬೆಂಗಳೂರು, ಜೂ. 18: ಜಿಂದಾಲ್ ಗೆ ಭೂಮಿ ಕೊಡಬಾರದೆಂದು ರಾಜ್ಯದಲ್ಲಿ ಹಲವಾರು ರಾಜ್ಯಕಾರಣಿಗಳು, ಸಂಘ ಸಂಸ್ಥೆಗಳು ಸೇರಿ ತೀವ್ರ ಹೋರಾಟ ನಡೆಸುತ್ತಿವೆ. ಹೌದು, ಇಂದು ಕೂಡ ನೆಲಮಂಗಲದಲ್ಲಿ ಜಿಂದಾಲ್ ಗೆ ಭೂಮಿ ಕೊಡಬಾರದೆಂದು ಕನ್ನಡ ನಾಡು ನುಡಿ ಉಳಿಸುವ ನಿಟ್ಟಿನಲ್ಲಿ ಕನ್ನಡ ಅಭಿಮಾನದ ಸಂಕಲ್ಪ ಯಾತ್ರೆ ಚಾಲನೆ, ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಕೈ ಬಿಡದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ. ಯಾತ್ರೆಗೆ ಚಾಲನೆ ನೀಡಿದ ಕನ್ನಡ ಸೇನೆ ರಾಜ್ಯಾದ್ಯಕ್ಷ ಕೆ.ಆರ್.ಕುಮಾರ್

ಕನ್ನಡ ಅಭಿಮಾನದ ಸಂಕಲ್ಪ ಯಾತ್ರೆಗೆ ಕನ್ನಡ ಸೇನೆ ರಾಜ್ಯಾದ್ಯಕ್ಷ ಕೆ.ಆರ್.ಕುಮಾರ್ ಚಾಲನೆ ನೀಡಿದರು. ಬೆಂಗಳೂರು ಹೊರವಲಯ ನೆಲಮಂಗಲದಿಂದ ಶಿರಸಿಯ ಭುವನಗಿರಿಯ ಭುವನೇಶ್ವರಿ ದೇವಾಲಯದವರೆಗೂ ಈ ಸಂಕಲ್ಪ ಯಾತ್ರೆಯನ್ನ ಆರಂಭಿಸಿದರು. ಇನ್ನೂ ಇದೇ ವೇಳೆ ರಾಜ್ಯದ ಹಿತದೃಷ್ಟಿಯಿಂದ ಕೂಡಲೇ ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ ಭೂಮಿ ಮಾರಾಟವನ್ನ ಕೈ ಬಿಡದಿದ್ದರೆ, ರಾಜ್ಯಾದ್ಯಂತ ಕನ್ನಡ ಸೇನೆ ಸಂಘಟನೆಯಿಂದ ತೀವ್ರ ಹೋರಾಟದ ಎಚ್ಚರಿಕೆಯನ್ನ ರಾಜ್ಯ ಸರ್ಕಾರಕ್ಕೆ ಕನ್ನಡ ಸೇನೆ ರಾಜ್ಯಾದ್ಯಕ್ಷ ಕೆ.ಆರ್.ಕುಮಾರ್ ಹೇಳಿದ್ದಾರೆ.

ಕನ್ನಡ ನಾಡು ನುಡಿ ಉಳಿಸುವ ನಿಟ್ಟಿನಲ್ಲಿ ಆರಂಭವಾದ ಈ ಯಾತ್ರೆಯಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿ ಸಂಚರಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos