ವಾಷಿಂಗ್ಟನ್, ಜೂನ್. 8, ನ್ಯೂಸ್ ಎಕ್ಸ್ ಪ್ರೆಸ್: ಅಮೆರಿಕಾದ 80 ಅತ್ಯಂತ ಶ್ರೀಮಂತ ಮಹಿಳೆಯರ ಪೈಕಿ 3 ಭಾರತೀಯ ಮೂಲದ ಮಹಿಳೆಯರನ್ನು ಫೋರ್ಬ್ಸ್ ಹೆಸರಿಸಿದೆ.ಹೊಸ ಉದ್ಯಮಗಳನ್ನು ರಚಿಸಿ ತಮ್ಮ ಸ್ವ ಸಾಮರ್ಥ್ಯದಿಂದ ಅಧಿಕ ಹಣ ಸಂಪಾದಿಸುವ ಮೂಲಕ ಅತ್ಯಂತ ಶ್ರೀಮಂತರ ಮಹಿಳೆಯರು ಎನ್ನಿಸಿಕೊಂಡಿದ್ದಾರೆ. ಕಂಪ್ಯೂಟರ್ ನೆಟ್ ವರ್ಕಿಂಗ್ ಕಂಪನಿ ಅರಿಸ್ಟಾ ನೆಟವರ್ಕ್ಸ್ ಅಧ್ಯಕ್ಷೆ ಹಾಗೂ ಸಿಇಒ ಜಯಶ್ರೀ ಉಲ್ಲಾಳ್, ಸಿಂಟೆಲ್ ಕಂಪನಿ ಸಹ ಸಂಸ್ಥಾಪಕಿ ನೀರಾಜ್ ಸೇಥಿ ಹಾಗೂ ಸ್ಟ್ರೀಮಿಂಗ್ ಡಾಟಾ ಟೆಕ್ನಾಲಜಿ ಕಂಪನಿ ಸಹ ಸಂಸ್ಥಾಪಕಿ ನೇಹಾ ನಾರ್ಕೆಡೆ ಪೋರ್ಬ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆಜಯಶ್ರೀ ಉಲ್ಲಾಳ್ ನಿವ್ವಳ ಆದಾಯ 1.4 ಬಿಲಿಯನ್ ಡಾಲರ್ ನಷ್ಟಾಗಿದ್ದು, 18ನೇ ಸ್ಥಾನದಲ್ಲಿದ್ದಾರೆ. 58 ವರ್ಷದ ಇವರು ಲಂಡನ್ ಜನಿಸಿ ಭಾರತದಲ್ಲಿ ಬೆಳದಿದ್ದರು. ಈಗ ಅಮೆರಿಕಾದ ಅತ್ಯಂತ ಶ್ರೀಮಂತರ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ ಎಂದು ಪೋರ್ಬ್ಸ್ ಹೇಳಿದೆ