ಬೆಂಗಳೂರು, ಜೂನ್.6, ನ್ಯೂಸ್ ಎಕ್ಸ್ ಪ್ರೆಸ್ : ಆನೆಗಳು ಗುಂಪಿನಲ್ಲಿ ಇದ್ದರೆ ಅಪಾಯ ವಿಲ್ಲ, ಆದರೆ ಒಂಟಿ ಸಲಗ ಯಾವತ್ತಿಗೂ ಡೇಜಂರ್. ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಪರಿ.
ಬೆಂಗಳೂರಿನ ಗವಿಪುರ ಗುಟ್ಟಳ್ಳಿಯ ಬಂಡೆ ಮಹಾಕಾಳಿ ದೇವಾಲಯದಲ್ಲಿ ಗುರುವಾರ ದುನಿಯಾ ವಿಜಯ್ ಅವರು ಅಭಿನಯಿಸುತ್ತಿರುವ ಸಲಗ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಆನೆ ನಡೆದಿದ್ದೇ ದಾರಿ ಎನ್ನುತ್ತಾರೆ, ಯಾವತ್ತೂ ಆನೆಗಳು ಒಟ್ಟಾಗಿದ್ದರೆ ನಮಗೆ ಅಪಾಯ ಉಂಟು ಮಾಡುವುದಿಲ್ಲ.ಆದರೆ ಒಂಟಿಯಾಗಿರುವ ಸಲಗಕ್ಕೆ ಭಯ ಜಾಸ್ತಿ, ಅದೆಕ್ಕೇನಾದರೂ ಅಪಾಯವಾಗುತ್ತದೆ ಎಂದು ನಮ್ಮ ಮೇಲೆ ದಾಳಿ ನಡೆಸಲು ಮುಂದಾಗುತ್ತದೆ ಎಂದರು.