ನವದೆಹಲಿ, ಜೂನ್. 1, ನ್ಯೂಸ್ ಎಕ್ಸ್ ಪ್ರೆಸ್: ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಮೂವರು ಮಂತ್ರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಚಿವರಾದ ಡಿವಿ ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಹಾಗೂ ಸುರೇಶ್ ಅಂಗಡಿಗೆ ಮೋದಿ ಛಾಟಿ ಬೀಸಿದ್ದಾರೆ.
ಪ್ರಮಾಣವಚನಕ್ಕೂ ಮೊದಲೇ ಈ ಮೂವರು `ನಮಗೆ ಸಚಿವ ಸ್ಥಾನ ಕೊಡ್ತಿದ್ದಾರೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು. ಈ ವಿಚಾರ ಮೋದಿಯವರ ಗಮನಕ್ಕೆ ಬಂದಿದ್ದು, ಪ್ರಮಾಣ ವಚನದಂದೇ ನಡೆದ ಸಭೆಯಲ್ಲಿ ಮೂವರಿಗೆ ಪಾಠ ಮಾಡಿದ್ದಾರೆ.