ತಿರುವನಂತಪುರ, ಜೂನ್.1, ನ್ಯೂಸ್ ಎಕ್ಸ್ ಪ್ರೆಸ್: ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕನನ್ನೊಬ್ಬ ನರ್ಸ್ ಮೇಲೆ ಹಲ್ಲೆ ನಡೆಸಿ ನಡೆಸಿ ಕಿವಿಯನ್ನು ಕತ್ತರಿಸಿರುವ ಘಟನೆ ತಿರುವನಂತಪುರದಲ್ಲಿ ನಡೆದಿದೆ ಎಂದು ಮಾಧ್ಯಮವೊಂದು ತಿಳಿಸಿದೆ.
ಆ್ಯಂಬುಲೆನ್ಸ್ ಚಾಲಕ ನಿತಿನ್ (35) ಎಂದು ಗುರುತಿಸಲಾಗಿದೆ. 39 ವರ್ಷದ ನರ್ಸ್ ಮೇಲೆ ಹರಿತವಾದ ಆಯುಧದಿಂದ ಆಕೆಯ ಕಿವಿಯನ್ನೇ ಕತ್ತರಿಸಿದ್ದ. ನಂತರ ಆಕೆಯ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಬಲವಾದ ಗಾಯವಾಗಿದ್ದು, ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ವಿವರಿಸಿದೆ.
ಇಬ್ಬರು ಒಂದೇ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪರಿಚಿತರಾಗಿದ್ದರು. ಆದರೆ ಯಾವುದೇ ಒಂದು ವಿಚಾರದಲ್ಲಿ ಆಕೆ ಒಪ್ಪದಿದ್ದಾಗ ಆತ ಆಕೆ ಮೇಲೆ ದಾಳಿ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.