ವರ್ಜಿನಿಯಾ, ಜೂನ್. 1, ನ್ಯೂಸ್ ಎಕ್ಸ್ ಪ್ರೆಸ್: ಬಂದೂಕುಧಾರಿಯೊಬ್ಬ ಸರ್ಕಾರಿ ಕಛೇರಿಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ ಪರಿಣಾಮ 11 ಜನರು ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ವರ್ಜಿನಿಯಾದಲ್ಲಿ ನಡೆದಿದೆ.
ವರ್ಜಿನಿಯಾ ಬೀಚ್ ಸಿಟಿ ಕಟ್ಟಡಕ್ಕೆ ನುಗ್ಗಿದ ಬಂದೂಕುಧಾರಿ ಈ ಕೃತ್ಯವೆಸಗಿದ್ದಾನೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಂದೂಕುಧಾರಿಯನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.
ಕೃತ್ಯವೆಸಗಿದ ದುಷ್ಕರ್ಮಿ ಕೂಡಾ ಅಲ್ಲಿನ ಕಛೇರಿಯ ನೌಕರನೆಂದು ಹೇಳಲಾಗಿದ್ದು, ಈತನ ಕೃತ್ಯಕ್ಕೆ ಕಾರಣವೇನೆಂಬುದು ತಿಳಿದುಬಂದಿಲ್ಲ.