ನಾಟಿಂಗ್‌ಹ್ಯಾಮ್, ಜೂನ್. 1, ನ್ಯೂಸ್ ಎಕ್ಸ್ ಪ್ರೆಸ್: ವೆಸ್ಟ್ ಇಂಡೀಸ್ ಐಸಿಸಿ ವಿಶ್ವಕಪ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದು ಭರ್ಜರಿ ಶುಭಾರಂಭ ಮಾಡಿದೆ. ತಾವು ಕೂಡ ವಿಶ್ವಕಪ್ ಗೆಲ್ಲುವ ಫೇವರಿಟ್ ಟೀಂ ಎಂದು ಸಾಬೀತು ಮಾಡಿದೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ಕೈಗೊಂಡ ನಾಯಕ ಜೇಸನ್ ಹೋಲ್ಡರ್, ಓಶಾನ್ ಥಾಮಸ್, ಆ್ಯಂಡ್ರೆ ರಸೆಲ್ ಅವರ ದಾಳಿ ಎದುರಿಸುವಲ್ಲಿ ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳು ಬಾಲಂಗೋಚಿಗಳಂತೆ ಒಬ್ಬರ ಹಿಂದೆ ಮತ್ತೊಬ್ಬರು ಪೆವಿಲಿಯನ್‌ಗೆ ಪೆರೆಡ್ ನಡೆಸಿದರು.
ಫಖಾರ್ ಜಮಾನ್,ಬಾಬರ್ ಅಜಾಮ್ ಸೇರಿ ( 22) ಮೊಹಮ್ಮದ್ ಹಫೀಜ್ (16),ವಹಾಬ್ ರಿಯಾಜ್ (18) ಇನ್ನುಳಿದವರು ಎರಡಂಕಿ ದಾಟಲೇ ಇಲ್ಲ. ಅಂತಿಮವಾಗಿ 21.4 ಓವರ್‌ಗಳಲ್ಲಿ ಪಾಕ್ 105 ರನ್‌ಗಳಿಗೆ ಆಲ್‌ಔಟ್ ಆಯಿತು. ಗುರಿ ಬೆನ್ನಟ್ಟಿದ ವಿಂಡೀಸ್, ಕ್ರಿಸ್ ಗೇಲ್ ಬಿರುಸಿನ ಅರ್ಧಶತಕದ ನೆರವಿನಿಂದ 13.4 ಓವರ್‌ಗಳಲ್ಲೇ ಮೂರು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.