ಬೆಂಗಳೂರು, ಜೂನ್.1, ನ್ಯೂಸ್ ಎಕ್ಸ್ ಪ್ರೆಸ್: ಪಟ್ಟಣದ 27ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಿತ್ರಾ ಪಿ.(19) ಜಯಗಳಿಸಿದ ವಿದ್ಯಾರ್ಥಿನಿ. ಪುರಸಭೆ ಚುನಾವಣೆಯಲ್ಲಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾಳೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ತಂದೆ ಪಚ್ಚಪ್ಪ ಪ್ರತಿನಿಧಿಸುತ್ತಿದ್ದ ವಾರ್ಡ್‌ನಲ್ಲಿ 534 ಮತಗಳನ್ನು ಪಡೆದು ಎದುರಾಳಿ ಗಾಯತ್ರಿ ಸಂದೀಪ್ ಎಂಬವರನ್ನು 121 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಸುಮಿತ್ರಾ ಮಾತನಾಡಿ, ತಂದೆ ಪಚ್ಚಪ್ಪ ಅವರು ಪುರಸಭೆ ಸದಸ್ಯರಾಗಿ ಸಲ್ಲಿಸಿದ ಸಮಾಜ ಸೇವೆ ನನ್ನನ್ನು ಸೆಳೆದಿತ್ತು. ಅದಕ್ಕಾಗಿ ಈಗ ನಾನೇ ಚುನಾವಣೆಗೆ ನಿಂತು ಗೆದ್ದಿದ್ದೇನೆ, ತಂದೆಗೆ ತಕ್ಕ ಮಗಳಾಗಿದ್ದೇನೆ. ಮುಂದೆ ಶಿಕ್ಷಣ ಹಾಗೂ ಪುರಸಭೆ ಸದಸ್ಯತ್ವದ ಕರ್ತವ್ಯಗಳೆರಡನ್ನೂ ತಂದೆ ಸಹಕಾರದಿಂದ ನಿರ್ವಹಿಸುವುದಾಗಿ ತಿಳಿಸಿದರು.