ಹುಬ್ಬಳ್ಳಿ, ಮೇ. 30, ನ್ಯೂಸ್ ಎಕ್ಸ್ ಪ್ರೆಸ್: ಬೈಕ್ ತಾಗಿದ ವಿಚಾರಕ್ಕೆ ಹುಬ್ಬಳ್ಳಿಯ ಮಾರು ಕಟ್ಟೆಯಲ್ಲಿ ತಮ್ಮತಮ್ಮ ಗಂಡಂದಿಯರ ಜೊತೆಗೆ ಮಾರು ಕಟ್ಟೆಗೆ ಬಂದಿದ ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಮಹಿಳೆಯರು ಮಾರುಕಟ್ಟೆಗೆ ತಮ್ಮ ಗಂಡಂದಿರ ಜೊತೆ ಬಂದಿದ್ದರು. ಬೈಕ್ ತಾಗಿದ್ದ ಹಿನ್ನಲೆ ಕುಪಿತಗೊಂಡ ಮಹಿಳೆ ಸವಾರನನ್ನು ನಿಂದಿಸಿದ್ದಾಳೆ. ಪತಿಯನ್ನು ನಿಂದಿಸುತ್ತಿದ್ದ ನೋಡಿದ ಸವಾರನ ಪತ್ನಿ ಮಹಿಳೆ ಮೇಲೆ ಎರಗಿದ್ದಾಳೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಕೊನೆಗೆ ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದಾರೆ. ಕೊನೆಗೆ ಇಬ್ಬರು ಮಹಿಳೆಯರ ಗಂಡಂದಿರನ್ನು ತಮ್ಮ ಪತ್ನಿಯರನ್ನು ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.