ಬೆಂಗಳೂರು, ಮೇ. 30, ನ್ಯೂಸ್ ಎಕ್ಸ್ ಪ್ರೆಸ್: 2019ರ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ 2ನೇ ಬಾರಿಗೆ ಪ್ರಧಾನಿ ಪಟ್ಟ ಏರುತ್ತಿರುವ ನರೇಂದ್ರ ಮೋದಿ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹಾಡಿ ಹೊಗಳಿ ಶುಭಾಶಯ ಕೋರಿದ್ದಾರೆ.
ಇಂದು ಸಂಜೆ ಮೋದಿ ಅವರ ಪದಗ್ರಹಣ ಸಮಾರಂಭ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್.ವಿಶ್ವನಾಥ್ ಅವರು ಟ್ವೀಟ್ ಮೂಲಕ ಮೋದಿ ಅವರಿಗೆ ಶುಭ ಕೋರಿದ್ದಾರೆ.
ಭಾರತದ ಎಲ್ಲಾ ಜಾತಿ ಜನಾಂಗ ಧರ್ಮ ಭಾಷಿಕರಣ ಆಶಯಗಳಂತೆ ಒಂದಾಗಿ ಎಲ್ಲರೂ ಭವಿಷ್ಯದ ಬಲ ಭೀಮನಾಗಿ ಪ್ರಧಾನಿ ಮೋದಿ ಅವರು ಹೆಜ್ಜೆ ಹಾಕಲಿ ಎಂದು ಆಶೀಸುತ್ತೇನೆ. 2ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ನಿಮಗೆ ಶುಭಾಶಯಗಳು ಎಂದು ಶುಭ ಹಾರೈಸಿದ್ದಾರೆ.