ರತನ್ಪುರ, ಮೇ.28, ನ್ಯೂಸ್ ಎಕ್ಸ್ ಪ್ರೆಸ್: ರಾಜಸ್ತಾನದಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ಪೂಜೆ ಮಾಡ್ತಿದ್ದ ಮಹಿಳೆಯೊಬ್ಬಳು ಕಾಣೆಯಾಗಿದ್ದಾಳೆ. ಇದು ದೇವರ ಕೃಪೆ ಎಂದು ನಂಬಿರುವ ಜನರು ಆಕೆ ಮನೆಯನ್ನು ದೇವಸ್ಥಾನ ಮಾಡಿಕೊಂಡಿದ್ದಾರೆ. ದಿನಕ್ಕೆ ನೂರಾರು ಜನ ಇಲ್ಲಿಗೆ ಬಂದು ಪೂಜೆ ಮಾಡ್ತಿದ್ದಾರೆ.
ರತನ್ಪುರಾ ಗ್ರಾಮದಲ್ಲಿ 26 ವರ್ಷದ ಲೀಲಾದೇವಿ ಶನಿವಾರ ಪೂಜೆ ಮಾಡ್ತಿದ್ದಳಂತೆ. ಕೋಣೆ ಬಾಗಿಲು ಹಾಕಿತ್ತು ಎನ್ನಲಾಗಿದೆ. ಸ್ವಲ್ಪ ಸಮಯದ ನಂತ್ರ ಬಾಗಿಲು ತೆಗೆದ್ರೆ ಲೀಲಾದೇವಿ ಅಲ್ಲಿರಲಿಲ್ಲ. ಮುಚ್ಚಿದ್ದ ಕೊಠಡಿಯಲ್ಲಿ ಲೀಲಾ ದೇವಿ ಕಣ್ಮರೆಯಾಗಿದ್ದಳು.ಈ ವಿಷ್ಯ ತಿಳಿಯುತ್ತಿದ್ದಂತೆ ನೂರಾರು ಜನರು ಮನೆಗೆ ಬಂದಿದ್ದಾರೆ.
ಜನರು ಲೀಲಾದೇವಿ ಮನೆಯನ್ನು ದೇವಸ್ಥಾನ ಮಾಡಿಕೊಂಡಿದ್ದಾರೆ. ಆಕೆ ಕುಳಿತಿದ್ದ ಜಾಗದಲ್ಲಿ ಭಸ್ಮವಿದ್ದು, ಅದನ್ನು ಪೂಜಿಸುತ್ತಿದ್ದಾರೆ. ಸಾಧು-ಸಂತರಿಂದ ಹಿಡಿದು ಅನೇಕರು ಲೀಲಾದೇವಿ ಮನೆಗೆ ಬಂದು ಪೂಜೆ, ಆರಾಧನೆ ಮಾಡ್ತಿದ್ದಾರೆ. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.