‘ಅಮ್ಮನನ್ನು ಬದುಕಿಸಿ ಕೊಡಿ’: ಭಾಗ್ಯ

‘ಅಮ್ಮನನ್ನು ಬದುಕಿಸಿ ಕೊಡಿ’: ಭಾಗ್ಯ

ಕೊಪ್ಪಳಮೇ. 27, ನ್ಯೂಸ್‍ ಎಕ್ಸ್ ಪ್ರೆಸ್‍:  ಅಮ್ಮ ಮಕ್ಕಳಿಗೆ ಜೀವ ನೀಡ್ತಾಳೆ, ಬದುಕು ಕಟ್ಟಿಕೊಡುತ್ತಾಳೆ. ಆದ್ರೆ, ಕೊಪ್ಪಳ ಜಿಲ್ಲೆಯಲ್ಲಿ ಬಾಲಕಿ ತನ್ನ ತಾಯಿಯನ್ನು ಬದುಕಿಸಲು ಪರದಾಡುತ್ತಿರುವ  ಕಥೆ ಕೇಳಿದ್ರೆ ಎಂತವರ ಕಣ್ಣಾಲಿಯೂ ಒದ್ದೆಯಾಗುತ್ತೆ.

ಕೊಪ್ಪಳ ಜಿಲ್ಲೆಯ ಕಾರಟಗಿಯ ಸಿದ್ದಾಪೂರ  ಬಾಲಕಿ ಭಾಗ್ಯ. ತನ್ನ ತಾಯಿ ದುರ್ಗಮ್ಮ ಜಿಲ್ಲಾಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಎಂದು ತಿಳಿದ ಅಮ್ಮನ ಜೀವ ಉಳಿಸಿಕೊಳ್ಳಲು ಜಿಲ್ಲಾಸ್ಪತ್ರೆಯಲ್ಲಿ ಏನ್ನೆಲ್ಲಾ ಕಸರತ್ತು ಪಡುತ್ತಿದ್ದಾಳೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಈರಣ್ಣ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದ್ದಾರೆ.  ‘’ಬಾಲಕಿ ಭಾಗ್ಯಳಿಗೆ ಶಿಕ್ಷಣ ಕೊಡಿಸಲು ಸಿದ್ದರಿದ್ದೇವೆ. ಆದ್ರೆ ಅವಳು ತಾನು ಕಲಿಯುತ್ತಿರುವ ಶಾಲೆಯಲ್ಲೆ ಹೋಗುವುದಾಗಿ ಹೇಳಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos