ಶಿವಮೊಗ್ಗ , ಮೇ. 25, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಮೋದಿ ನೇತೃತ್ವದ ಎನ್ ಡಿಎ ಗೆಲುವು ಸಾಧಿಸಿದೆ. ಬೇಳೂರು ಶಾಸಕ ಗೋಪಾಲ್ ಕೃಷ್ಣ ಸಾಗರ ಪಟ್ಟಣದ ಅಣಲೆಕೊಪ್ಪ ವಾರ್ಡಿನಲ್ಲಿ ನಗರಸಭೆ ಚುನಾವಣಾ ಪ್ರಚಾರ ನಡೆಸಿ ಹಿಂತಿರುಗುವಾಗ ಮೋದಿ ಅಭಿಮಾನಿಗಳಿಗೆ ಕಾಂಗ್ರೆಸ್ ಘೊಷಣೆ ಕೂಗಿ ಎಂದು ಅವಾಜ್ ಹಾಕಿರುವ ಘಟನೆ ಶಿವಮೋಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದಿದೆ.
ಸಾಗರ ಪಟ್ಟಣದ ಅಣಲೆಕೊಪ್ಪ ವಾರ್ಡಿನಲ್ಲಿ ನಗರಸಭೆ ಚುನಾವಣಾ ಪ್ರಚಾರದ ಹಿನ್ನೆಲೆ ಬೇಳೂರು ಶಾಸಕ ಗೋಪಾಲ್ ಕೃಷ್ಣ ಅವರ ಕಾರು ತಡೆಹಿಡಿದ್ದು, ಮೋದಿ, ಮೋದಿ ಎಂಬ ಘೋಷಣೆ ಮೊಳಗಿದ್ದರು. ಈ ವೇಳೆ ಕಾರಿನಿಂದ ಇಳಿದ್ದು, ಕಾಂಗ್ರೆಸ್, ಕಾಂಗ್ರೆಸ್ ಎಂದು ಕೂಗುವಂತೆ ಅವಾಜ್ ಹಾಕಿದ್ದಾರೆ.