ದಾವಣಗೆರೆ, ಮೇ. 25, ನ್ಯೂಸ್ ಎಕ್ಸ್ ಪ್ರೆಸ್: ಪ್ರೀತಿಯ ವಿಚಾರವಾಗಿ ಯೋಧನ್ನೊಬ್ಬ ಗುಂಡುಹಾರಿಸಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಗ್ರಾಮದ ಇನ್ನೋರ್ವರ ಪ್ರಕಾಶ್ ಎಂಬುವರ ಮೇಲೆ ಗುಂಡು ಹಾರಿಸಿದ ರಜೆಯ ಮೇಲೆ ಬಂದಿದ್ದ ಈ ಯೋಧ ದೇವರಾಜ್ ರನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.
ಬಿದರಗಟ್ಟೆ ಗ್ರಾಮದ ಯೋಧ ದೇವರಾಜ್ (27) ಬಂಧಿತ. ಯೋಧ ಅದೇ ಗ್ರಾಮದ ಪ್ರಕಾಶ್ ಎಂಬುವರ ಮಗಳನ್ನು ಪ್ರೀತಿಸುತ್ತಿದ್ದ, ದೇವರಾಜ್ ಪ್ರೀತಿ ವಿಚಾರವಾಗಿ ಯುವತಿಯ ತಂದೆ ಪ್ರಕಾಶ್ ಜತೆ ವಾಗ್ದಾದ ನಡೆಸಿದ್ದ. ಕೋಪಕೊಂಡು ಪ್ರಕಾಶ್ ಮೇಲೆ ಗುಂಡು ಹಾರಿಸಿದ್ದಾನೆ ಎಂದು ತಿಳಿದು ಬಂದಿದೆ. ಗಾಯಾಳನ್ನು ಶಿವಮೊಗ್ಗದ ಮೆಗ್ಗನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯೋಧನನ್ನು ಬಂಧಿಸಿರುವ ಹೊನ್ನಾಳಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.