ಸಿಇಟಿ ಫಲಿತಾಂಶ: ಇಂಜಿನಿಯರಿಂಗ್‌ನಲ್ಲಿ ‘ಜಫಿನ್ ಬಿಜು’ ರಾಜ್ಯಕ್ಕೆ ಫಸ್ಟ್..!

ಸಿಇಟಿ ಫಲಿತಾಂಶ: ಇಂಜಿನಿಯರಿಂಗ್‌ನಲ್ಲಿ ‘ಜಫಿನ್ ಬಿಜು’ ರಾಜ್ಯಕ್ಕೆ ಫಸ್ಟ್..!

ಬೆಂಗಳೂರು, ಮೇ. 25, ನ್ಯೂಸ್‍ ಎಕ್ಸ್ ಪ್ರೆಸ್‍: ವೃತ್ತಿ ಶಿಕ್ಷಣ ಕೋರ್ಸ್‍ಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪರೀಕ್ಷೆ ( ಸಿಇಟಿ) ರಿಸಲ್ಟ್‍ ಕೊನೆಗೂ ಹೊರಬಂದಿದೆ.  ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಫಲಿತಾಂಶ ಪ್ರಕಟಿಸಿದ್ರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‍ ಸೈಟ್‍ನಲ್ಲಿ ಫಲಿತಾಂಶ ನೋಡಬಹುದು.

(http://kea.kar.nic.in ) ಸೇರಿದಂತೆ http://cet.kar.nic.in.http://karresults.nic.in ವೆಬ್‍ಸೈಟ್‍ಗಳಲ್ಲಿ ಫಲಿತಾಂಶ ನೋಡಬಹುದು.

ರ್ಯಾಂಕ್‍ ಪಡೆದ ವಿದ್ಯಾರ್ಥಿಗಳು

ಇಂಜಿನಿಯರಿಂಗ್‍ ವಿಭಾಗ : ಬಿಫಿನ್‍ ಬಿಜು ( ಪ್ರಥಮ )  ಸ್ಥಾನ ಪಡೆದಿದ್ದಾರೆ. ಇವರು ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಮಂಗಳೂರಿನ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ಚಿನ್ಮಯಿ ಅವರು ದ್ವಿತೀಯ, ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ಸಾಯಿ ಸಾಕೇತಿಕ ಚೆಕೂರಿ  ಅವರು ತೃತೀಯ ಸ್ಥಾನ ಪಡೆದಿದ್ದಾರೆ.

ನ್ಯಾಚುರೋಪತಿ ಮತ್ತು ಯೋಗ :  ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ವಿದ್ಯಾರ್ಥಿ  ಮಹೇಶ್ ಆನಂದ್ ಅವರು ಪ್ರಥಮ, ಮೈಸೂರಿನ ಬೇಸ್‌ ಪಿಯು ಕಾಲೇಜಿನ ವಾಸುದೇವ್  ಅವರು ದ್ವಿತೀಯ ಹಾಗೂ ಬೆಂಗಳೂರಿನ  ನಾರಾಯಣ ಇ ಟೆಕ್ನೋ ಸ್ಕೂಲ್‌ನ ಉದಿತ್ ಮೋಹನ್  ಅವರು ತೃತೀಯ ಸ್ಥಾನ ಪಡೆದಿದ್ದಾರೆ.

ಬಿಎಸ್‌ಸಿ ಕೃಷಿ ವಿಭಾಗ : ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ಕೀರ್ತನಾ ಎಂ ಅರುಣ್ ಪ್ರಥಮ, ಮಂಗಳೂರಿನ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ಭುವನ್ ಬಿ  ಅವರು ದ್ವಿತೀಯ ಹಾಗೂ ಹಾಸನದ ಮಾಸ್ಟರ್ಸ್‌ ಪಿಯು ಶ್ರೀಕಾಂತ್ ಎಂಲ್  ಅವರು ತೃತೀಯ ಸ್ಥಾನ ಪಡೆದಿದ್ದಾರೆ.

ಬಿಎಸ್‌ಸಿ ಪಶುವಿಜ್ಞಾನ ವಿಭಾಗ:   ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ  ಪಿ ಮಹೇಶ್ ಆನಂದ್  ಅವರು ಪ್ರಥಮ, ಬೆಂಗಳೂರಿನ ಉದಿತ್ ಮೋಹನ್ ಅವರು ದ್ವಿತೀಯ ಹಾಗೂ ಬೆಂಗಳೂರಿನ ಸಾಯಿ ರಾಮ್  ಅವರು ತೃತೀಯ ಸ್ಥಾನ ಪಡೆದಿದ್ದಾರೆ.

ಡಿ ಫಾರ್ಮಾ ಮತ್ತು ಫಾರ್ಮಾ ಡಿ ವಿಭಾಗ: ದಲ್ಲಿ ಬೆಂಗಳೂರಿನ ಚೈತನ್ಯ ಟೆಕ್ನೋ ಪಿಯು ಕಾಲೇಜಿನ  ಸಾಯಿ ಸಾಕೇತಿಕ ವಕುರಿ ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ಸ್ಥಾನವನ್ನು ಇದೇ ಕಾಲೇಜಿನ ಜಫಿನ್ ಬಿಜು, ತೃತೀಯ ಸ್ಥಾನವನ್ನು  ಮಂಗಳೂರಿನ ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ಪಿ ಚಿನ್ಮಯಿ ಪಡೆದಿದ್ದಾರೆ.ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ 10 ಸ್ಥಾನ ಬೆಂಗಳೂರು, 2 ಸ್ಥಾನ ಮಂಗಳೂರು ಹಾಗೂ 1 ಸ್ಥಾನ ಬಳ್ಳಾರಿಗೆ ಲಭಿಸಿದೆ. ಏಪ್ರಿಲ್ 29 ಹಾಗೂ 30ರಂದು  ಸಿಇಟಿ ಪರೀಕ್ಷೆ ರಾಜ್ಯದ 431 ಕೇಂದ್ರಗಳಲ್ಲಿ ನಡೆದಿತ್ತು.

 

 

 

 

 

 

 

 

 

 

 

 

 

 

 

 

 

 

ಬಿಫಿನ್‍ ಬಿಜು ( ಪ್ರಥಮ ) ಬೆಂಗಳೂರು, ಚಿನ್ಮಯಿ ( ದ್ವಿತೀಯ ) ಮಂಗಳೂರು, ಸಾಯಿ ಸಾಕೇತಿಕ ಚೆಕೂರಿ ( ತೃತೀಯ) ಬೆಂಗಳೂರು

 

ಫ್ರೆಶ್ ನ್ಯೂಸ್

Latest Posts

Featured Videos