ಬೆಂಗಳೂರು, ಮೇ. 25 , ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯ ಸೋಲಿನ ಕಹಿ ಬೆನ್ನಲ್ಲೇ ಕಾಂಗ್ರೆಸ್ ನಲ್ಲೀಗ ರಾಜೀನಾಮೆ ಪರ್ವ ಆರಂಭವಾಗಿದೆ. ಇನ್ನೂ 2 ದಿನದಲ್ಲಿ ಕಾಂಗ್ರೆಸ್, ಜೆಡಿಎಸ್‍ನ 5 ಶಾಸಕರು ಮತ್ತು ಸಚಿವರೊಬ್ಬರು ಹೋಗಲು ರೆಡಿ ಇದ್ದಾರೆ ಎಂದು ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಹಬ್ಬಿದೆ.
ಬಿಜೆಪಿ ಪಾಳಯದಲ್ಲಿ ಮತ್ತೆ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಬಿಜೆಪಿ ನಾಯಕರನ್ನು 6 ಜನ ‘ಕೈ’ ಶಾಸಕರು ಸಂಪರ್ಕ ಮಾಡಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ವಲಯದಲ್ಲಿ ರಾಜೀನಾಮೆ ಚರ್ಚೆ ಶುರುವಾಗಿದೆ.
ಬಿಜೆಪಿ ಸಂಪರ್ಕದಲ್ಲಿ ‘ಕೈ’
ಹೊಸಕೋಟೆ ಶಾಸಕ, ಸಚಿವ, ಎಂ.ಟಿ.ಬಿ.ನಾಗರಾಜ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಹಳ್ಳಿ, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಮತ್ತು ಬೇಲೂರು ಶಾಸಕ ಲಿಂಗೇಶ್ ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿ ಇದ್ದಾರೆ ಎನ್ನಲಾಗಿದೆ.