ದೇಶದ ಇತಿಹಾಸದಲ್ಲಿ ಕಾಂಗ್ರೆಸ್‍ ಗೆ ಮೊದಲ ಬಾರಿಗೆ ಹೀನಾಯ ಸೋಲು..!

ದೇಶದ ಇತಿಹಾಸದಲ್ಲಿ ಕಾಂಗ್ರೆಸ್‍ ಗೆ ಮೊದಲ ಬಾರಿಗೆ ಹೀನಾಯ ಸೋಲು..!

ಬೆಂಗಳೂರು, ಮೇ. 23, ನ್ಯೂಸ್‍ ಎಕ್ಸ್ ಪ್ರೆಸ್‍: ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‍ ಹೀನಾಯ ಸೋಲು ಕಾಣುತ್ತಿದೆ. ಕಳೆದ 30 ವರ್ಷಗಳ ಚುನಾವಣೆ ಫಲಿತಾಂಶದಲ್ಲಿನ ಎಲ್ಲ ದಾಖಲೆಗಳನ್ನು ಬಿಜೆಪಿ ಮುರಿದಿದೆ. ದೇಶದಲ್ಲಿ ಶೇ. 59 ಕ್ಕಿಂತ ಹೆಚ್ಚು ಮತಗಳನ್ನು ಬಿಜೆಪಿ ಪಡೆದಿದ್ದು, ನಾಗಲೋಟ ಮುಂದುವರಿಸಿದೆ. 542 ರಲ್ಲಿ 347 ಕ್ಷೇತ್ರಗಳಲ್ಲಿ ಎನ್ ಡಿಎ, ಯುಪಿಎ 91 ಮತ್ತು ಇತರರು 104 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಇನ್ನು ಕರ್ನಾಟಕದಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ‘ಕರ್ನಾಟಕ’ದಲ್ಲಿ ಕಾಂಗ್ರೆಸ್‍ ‘ಕೋಮಾ ಸ್ಥಿತಿ’ಗೆ ತಲುಪಿದೆ.

ಸೋಲಿಗೆ ಮೈತ್ರಿ ಕಾರಣ?

ಜೆಡಿಎಸ್‍- ಕಾಂಗ್ರೆಸ್ ದೋಸ್ತಿಯನ್ನು ಕೇವಲ ಉಪಚುನಾವಣೆಗೆ ಮಾತ್ರವಲ್ಲದೆ ಲೋಕಸಭಾ ಚುನಾವಣೆಗೂ ತೆಗೆದುಕೊಂಡು ಹೋಗಿದ್ರು. ದೋಸ್ತಿಯಾಗಿ ಹೋದ್ರೆ ಬಿಜೆಪಿಯನ್ನು ಬಗ್ಗುಬಡಿಯಬಹುದು ಎನ್ನೋ ಕಾಂಗ್ರೆಸ್- ಜೆಡಿಎಸ್ ಲೆಕ್ಕಾಚಾರ ಉಲ್ಟಾ ಆಗಿದೆ.

2004 ಚುನಾವಣೆಯಲ್ಲಿ ಏನಾಗಿತ್ತು?

2004ರಲ್ಲಿ ಬಿಜೆಪಿ 18, ಕಾಂಗ್ರೆಸ್ 8,  ಜೆಡಿಎಸ್ 2 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ವು.

2009 ರಲ್ಲಿ ಮರ್ಯಾದೆ ಉಳಿಸಿಕೊಂಡಿದ್ದ ಕಾಂಗ್ರೆಸ್‍

2009ರ ಚುನಾವಣೆಯಲ್ಲಿ ಬಿಜೆಪಿ 19, ಕಾಂಗ್ರೆಸ್ 6, ಜೆಡಿಎಸ್ 3ಸ್ಥಾನಗಳನ್ನು ಗೆದ್ದಿತ್ತು. 2009ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದು ಮರ್ಯಾದೆ ಉಳಿಸಿಕೊಂಡಿತ್ತು.

2014 ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕಾಂಗ್ರೆಸ್

2014ರ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 9  ಜೆಡಿಎಸ್ 2 ಸ್ಥಾ ನಗಳನ್ನು ಪಡೆದಿತ್ತು.  ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ 2014ರಲ್ಲಿ ಕಾಂಗ್ರೆಸ್‍ನ ಮತಗಳಿಕೆ ಶೇ. 3.15ರಷ್ಟು ಹೆಚ್ಚಳವಾಗಿದ್ದರೂ. ಸ್ಥಾನ ಗಳಿಕೆಯಲ್ಲಿ 3 ಕ್ಷೇತ್ರಗಳು ಹೆಚ್ಚಾಗಿದ್ದವು, ಬಿಜೆಪಿ 3, ಜೆಡಿಎಸ್ 1ಸ್ಥಾನವನ್ನು ಕಳೆದುಕೊಂಡಿದ್ದವು.

2019 ರಲ್ಲಿ ನೆಲಕಚ್ಚಿದ ಕಾಂಗ್ರೆಸ್‍

ಜೆಡಿಎಸ್ ಜತೆಗಿನ ಮೈತ್ರಿಯಿಂದ ಕಾಂಗ್ರೆಸ್‍ಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಅನ್ನೋದು ಸಿದ್ದರಾಮಯ್ಯ ಸೇರಿದಂತೆ ಹಿರಿಯರಿಗೆ ಗೊತ್ತಿತ್ತು. ಆದ್ರೆ ಅದ್ಯಾವುದನ್ನೂ ಲೆಕ್ಕಿಸದೇ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದೆ. ರಾಹುಲ್ ಗಾಂಧಿ ರಾಷ್ಟ್ರ ರಾಜಕಾರಣದಲ್ಲಿ ಮೈತ್ರಿಗೆ ರಾಜ್ಯ ನಾಯಕರ ಮೇಲೆ ಒತ್ತಡ ಹಾಕಿದ್ದರು. ಜೆಡಿಎಸ್ ಜೊತೆ ಮೈತ್ರಿಯೇ ಕಾಂಗ್ರೆಸ್‍ ಮುಕ್ತ ಭಾರತಕ್ಕೆ ಮುನ್ನುಡಿ ಬರೆದಿದೆ.

 

 

 

 

ಫ್ರೆಶ್ ನ್ಯೂಸ್

Latest Posts

Featured Videos