ಮೇ. 20, ನ್ಯೂಸ್ ಎಕ್ಸ್ ಪ್ರೆಸ್ : ‘ಗಾಂಧೀಜಿ ರೈಲಿನಲ್ಲಿ ಪ್ರಯಾಣ ಮಾಡುತ್ತಿರಬೇಕಾದರೆ ಒಂದು ಚಪ್ಪಲಿ ಕಾಣಿಸಲಿಲ್ಲ. ಅದನ್ನು ತೆಗೆದುಕೊಂಡವರಿಗೆ ಉಪಯೋಗವಾಗಲಿ ಎಂಬ ಕಾರಣಕ್ಕೆ ಎರಡನೇ ಚಪ್ಪಲಿಯನ್ನೂ ಎಸೆದರು ಎಂಬ ಸಂಗತಿಯನ್ನು ಅವರ ಆತ್ಮಕಥೆಯಲ್ಲಿ ಓದಿದ್ದೇನೆಂದು ನಟ, ಮಕ್ಕಳ್ ನೀಧಿ ಮಯ್ಯಂ ಅಧ್ಯಕ್ಷ ಕಮಲ್ ಹಾಸನ್ ಹೇಳಿದ್ದಾರೆ.
ಸ್ವತಂತ್ರ ಭಾರತದ ಮೊದಲ ‘ಉಗ್ರ’ ಹಿಂದೂ. ಅವರ ಹೆಸರು ‘ನಾಥೊರಾಮ್ ಗೋಡ್ಸ್’ ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ ಅವರು, ಇನ್ನೊಂದು ಚಪ್ಪಲಿಗಾಗಿ ಎದುರು ನೋಡುತ್ತಿದ್ದೇನೆ. ಇತ್ತೀಚಿಗೆ ಚುನಾವಣಾ ಪ್ರಚಾರದಲ್ಲಿ ಕೆಲವರು ಅವರ ಮೇಲೆ ಕೋಳಿಮೊಟ್ಟೆ, ಟೊಮೆಟೊಗಳನ್ನು ಎಸೆದಿದ್ದಾರೆ. ಓರ್ವ ಚಪ್ಪಲಿಯನ್ನೂ ಸಹ ಎಸೆದಿದ್ದಾರೆ ಎಂದರು.