ಮಹಾರಾಷ್ಟ್ರ, ಮೇ. 20, ನ್ಯೂಸ್ ಎಕ್ಸ್ ಪ್ರೆಸ್: ಹತ್ತಾರು ಕಾರಣಗಳಿಗಾಗಿ ಇಂದು ಇಡೀ ದೇಶದ ಗಮನ ಸೆಳೆಯುತ್ತಿರುವ ಪ್ರಮುಖ ಲೋಕಸಭಾ ಕ್ಷೇತ್ರಗಳ ಪೈಕಿ ಮಹಾರಾಷ್ಟ್ರದ ನಾಗಪುರ ಲೋಕಸಭಾ ಕ್ಷೇತ್ರವೂ ಒಂದು. ಬಿಜೆಪಿಯ ಸೈದ್ಧಾಂತಿಕ ಮುಖವಾಣಿ ಆರ್ಎಸ್ಎಸ್ ಕೇಂದ್ರ ಕಚೇರಿ ಇರುವುದು ಇದೇ ನಾಗಪುರದಲ್ಲಿ. ಮಹಾರಾಷ್ಟ್ರದ ನಾಗಪುರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬಿಜೆಪಿ ಪಕ್ಷದ ಹಿರಿಯ ನಾಯಕ ಸಚಿವ ನಿತಿನ್ ಗಡ್ಕರಿ. ಈ ಕ್ಷೇತ್ರವನ್ನು ನಿತಿನ್ ಗಡ್ಕರಿ ಪ್ರತಿನಿಧಿಸುತ್ತಿರುವುದು ಇದೇ ಮೊದಲು. ಆದ್ರೆ ಈ ಬಾರಿ ನಿತಿನ್ ಗಡ್ಕರಿ ಸೋಲ್ತಾರೆ ಅಂತ ಇಲ್ಲಿನ ಸಮೀಕ್ಷೆಗಳು ಹೇಳ್ತಿವೆ.
ಮೋದಿ ಅಲೆಯಿಂದ ಗೆದ್ದು ಬೀಗಿದ್ದ ಗಡ್ಕರಿ!
2014ರ ಚುನಾವಣೆಯಲ್ಲಿ ನಾಗಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲು ಮೋದಿ ಅಲೆಯೇ ಕಾರಣ. ಆದ್ರೆ ಇದೀಗ ನಾಗ್ಪುರದಲ್ಲಿ ಮೋದಿ ಅಲೆ ಇಲ್ಲ. ಬದಲಾಗಿ ಬಿಜೆಪಿ ಆಡಳಿತ ವಿರೋಧಿ ಅಲೆ ಇದೆ. ಕಳೆದ ಐದು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೀಡಿದ ಯಾವ ಭರವಸೆಗಳು ಈಡೇರಿಸದ ಕಾರಣ ಭ್ರಮನಿರಸನಗೊಂಡ ಈ ಎಲ್ಲಾ ಮತಗಳು ಮತ್ತೆ ಕಾಂಗ್ರೆಸ್ ಕಡೆಗೆ ವಾಲಿವೆ ಎನ್ನಲಾಗ್ತಿದೆ. ಜೊತೆಗೆ ಕಾಂಗ್ರೆಸ್ ಭಿನ್ನ ತಂತ್ರ, ಸ್ಥಳೀಯ ಬಿಜೆಪಿಯೊಳಗೆ ಆಂತರಿಕ ಕಚ್ಚಾಟ ಈ ಬಾರಿ ನಿತಿನ್ ಗಡ್ಕರಿಗೆ ಖಚಿತವಾಗಿ ಸೋಲುಂಟಾಗಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳುತ್ತಿವೆ.
ಮತ್ತೆ ಗೆಲ್ತಾರಾ ನಾನಾಭಾವ್ ಪಟೋಲ್?
ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದ ಮಹಾರಾಷ್ಟ್ರದ ಭಂದಾರ-ಗೋಂಡಿಯಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ನಾನಾಭಾವ್ ಪಟೋಲ್, 2014ರಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಇದೀಗ ಮತ್ತೆ ನಾಗಪುರದಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಸ್ಪರ್ಥಿಸಿದ್ದಾರೆ. ಒಟ್ಟಾರೆ ಆರ್ಎಸ್ಎಸ್ ಕೇಂದ್ರ ಕಚೇರಿ ಇರುವ ಕ್ಷೇತ್ರದಲ್ಲೇ ಗೆಲುವು ಸಾಧಿಸಲು ಬಿಜೆಪಿ ಸರಿಸುಮಾರು 6 ದಶಕಗಳ ಕಾಲ ಕಾದಿತ್ತು. ಇದೀಗ ಮತ್ತೆ ಸೋಲಿನ ಭೀತಿ ಉಂಟಾಗಿದೆ.