ಉತ್ತರಖಂಡ್, ಮೇ. 18, ನ್ಯೂಸ್ ಎಕ್ಸ್ ಪ್ರೆಸ್ : 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥನ ದರ್ಶನ ಪ್ರಧಾನಮಂತ್ರಿ ನರೇಂದ್ರ ಮೋದಿ ಪಡೆದುಕೊಂಡಿದ್ದಾರೆ. ಅಲ್ಲಿಂದ ಸುಮಾರು ಅರ್ಧಕಿಲೋಮೀಟರ್ ದೂರ ಇರುವ ಗುಹೆಯೊಂದಕ್ಕೆ ತೆರಳಿರುವ ಪ್ರಧಾನಿ ಮೋದಿ ಅಲ್ಲಿ ಧ್ಯಾನ ನಿರತರಾಗಿದ್ದಾರೆ.
ಬೌದ್ಧ ಪೌರ್ಣಿಮೆ ಹಿನ್ನಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೇದಾರನಾಥ್ ಹಾಗೂ ಬದ್ರಿನಾಥ್ ಪುಣ್ಯಧಾಮಗಳಿಗೆ ಎರಡು ದಿನಗಳ ಆಧ್ಯಾತ್ಮಿಕ ಪ್ರವಾಸಕೈಗೊಂಡಿದ್ದಾರೆ. ಕೇದಾರನಾಥ್ ದೇವಾಸ್ಥಾನದಿಂದ 1000 ಎತ್ತರ ಅಡಿ ಪವಿತ್ರ ಗುಹೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದ್ಯಾನದಲ್ಲಿ ಮಗ್ನರಾಗಿದ್ದಾರೆ. ನಾಳೆ ಬದ್ರಿನಾಥ್ ದೇವಾಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಮೋದಿ ಧ್ಯಾನ ಕ್ರಿಯೆಗೆ ಹೆಚ್ಚಿನ ಮಹತ್ವ ಕೊಡುತ್ತಾ ಬಂದಿದ್ದಾರೆ ಎಂದು ಮೂಲ ತಿಳಿಸಿವೆ.