ಬೆಂಗಳೂರು, ಮೇ. 17, ನ್ಯೂಸ್ ಎಕ್ಸ್ ಪ್ರೆಸ್: ಮಳೆಗಾಲ ಶುರುವಾಗುತ್ತಿದ್ದಂತೆ ಚರ್ಮ ಹಾಗೂ ಕೂದಲಿಗೆ ವಿಶೇಷ ಆರೈಕೆ ಬೇಕಾಗುತ್ತದೆ. ಸಾಕಷ್ಟು ನೀರು ಕುಡಿಯಿರಿ. ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಿ. ಅತಿಯಾದ ಡಯೆಟ್ ಬೇಡ. ವಿಟಮಿನ್-ಸಿ ಇರುವ ಹಣ್ಣುಗಳನ್ನು ಹೆಚ್ಚಾಗಿ ಬಳಸಿ. ವಿಟಮಿನ್-ಸಿ ಯಿಂದ ಚರ್ಮಕ್ಕೆ ಹೊಳಪು ಬರುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಬಿಸಿಬಿಸಿ ಕರಿದ ತಿಂಡಿ ತಿನ್ನಲು ಮನಸ್ಸು ಬಯಸುತ್ತದೆ. ಎಣ್ಣೆಯುಕ್ತ ತಿಂಡಿಗಳು ಚರ್ಮದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಎಣ್ಣೆಯುಕ್ತ ತಿಂಡಿಯಿಂದ ದೂರವಿರುವುದು ಒಳ್ಳೆಯದು.
‘ಕಷಾಯ’ ಸೇವನೆ ಒಳ್ಳೆಯದು
ಚಹಾ, ಕಾಫಿಗಳ ಸೇವನೆಯ ಬದಲಾಗಿ, ತುಳಸಿ, ಪುದೀನಾ, ಶುಂಟಿ, ಲವಂಗದಿಂದ ತಯಾರಿಸಿದ ಕಷಾಯವನ್ನು ಕುಡಿಯುವದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. 8-10 ಬಾದಾಮಿಗಳನ್ನು ರಾತ್ರಿ ನೆನೆಸಿ ಮರುದಿನ ಬೆಳಿಗ್ಗೆ ಸಿಪ್ಪೆ ತೆಗೆದು ಅರೆಯಬೇಕು. ಇದಕ್ಕೆ ಶುದ್ಧ ಜೇನು ಹಾಗೂ ಗುಲಾಬಿಜಲ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಲೇಪಿಸಿ.ಲೇಪಿಸಿ 15 ನಿಮಿಷದ ಬಳಿಕ ತೊಳೆಯಿರಿ. ಅತಿಯಾದ ಬಿಸಿನೀರಿನನ್ನ ತಲೆಸ್ನಾನಕ್ಕೆ ಬಳಸಬೇಡಿ. ತಲೆಕೂದಲಿಗೆ ಮೈಲ್ಡ್ ಶಾಂಪೂವನ್ನು ಬಳಸಿ. ಒದ್ದೆಯಾಗಿರುವ ಕೂದಲನ್ನು ಕಟ್ಟಬೇಡಿ. ಹೇರ್ ಡ್ರೈಯರ್ ಬಳಕೆಯನ್ನು ಮಳೆಗಾಲದಲ್ಲಿ ಕಡಿಮೆ ಮಾಡಿ.