ಹುಬ್ಬಳ್ಳಿ , ಮೇ. 16, ನ್ಯೂಸ್ ಎಕ್ಸ್ ಪ್ರೆಸ್: ನಾನು 9 ನೇ ತರಗತಿ ಬರೋವರೆಗೂ ನಾನು ಚಪ್ಪಲಿ ಹಾಕಿಲ್ಲ, ಬರಿಗಾಲಿನಿಂದ ನಡೆದಾಡುತ್ತಿದ್ದೆ, ನಮ್ಮಪ್ಪ ನನಗೆ ಅವಾಗ ಟೈರ್ ಚಪ್ಪಲಿ ಕೊಡಿಸಿದ್ದಾರೆ ಎಂದು ಸಿದ್ದರಾಮಯ್ಯ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.
ಹುಬ್ಬಳ್ಳಿ ಕುಂದಗೋಳ ಉಪ ಚುನಾವಣೆ ಹಿನ್ನೆಲೆ ಯರಗುಪ್ಪಿ ಗ್ರಾಮದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು 9 ನೇ ತರಗತಿ ಬರೋವರೆಗೂ ನಾನು ಚಪ್ಪಲಿ ಹಾಕಿಲ್ಲ, ಬರಿಗಾಲಿನಿಂದ ನಡೆದಾಡುತ್ತಿದ್ದೆ. ಅದರಿಂದ ನಾನು ‘ಶೂ’ ಭಾಗ್ಯ ಯೋಜನೆ ತಂದಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಂತರ ಪ್ರತಿಕ್ರಿಯೇ ನೀಡಿದ ಅವರು, ನಿಮ್ಮ ಬಳಿ ನಾವು ಬಂದಿರುವುದು ಶಿವಳ್ಳಿ ಧರ್ಮಪತ್ನಿ ಕುಸುಮ ಶಿವಳ್ಳಿಯವರಿಗೆ ನೀವು ಆಶೀರ್ವಾದ ಮಾಡಬೇಕೆಂದು ನಿಮ್ಮ ಬಳಿ ಮತ ಕೇಳಲಿಕ್ಕೆ ಬಂದಿದ್ದೇವೆ ಎಂದರು.