ಬೆಂಗಳೂರಯ, ಮೇ . 16, ನ್ಯೂಸ್ ಎಕ್ಸ್ ಪ್ರೆಸ್: ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಕಾಡುವ ಚರ್ಮದ ತೊಂದರೆಯಲ್ಲಿ ಭಂಗು ಕೂಡ ಒಂದು. ಹೆಚ್ಚಾಗಿ ಮುಟ್ಟು ನಿಲ್ಲುವ ಸಮಯದಲ್ಲಿ ಅಥವಾ ಮುಟ್ಟು ನಿಂತ ನಂತರ ಈ ಭಂಗು ಕಾಣಿಸಿಕೊಳ್ಳುತ್ತದೆ. ಕೆಲ ಸುಲಭ ಉಪಾಯಗಳನ್ನು ಅನುಸರಿಸಿದರೆ ಈ ಸಮಸ್ಯೆ ತಡೆಗಟ್ಟಬಹುದು.
ಕಿತ್ತಳೆ ಹಣ್ಣಿನ ತಾಜಾ ಸಿಪ್ಪೆಯನ್ನು ಮುಖಕ್ಕೆ ತಿಕ್ಕಿದರೆ ಭಂಗು ಕಡಿಮೆಯಾಗುತ್ತದೆ.
ಎಕ್ಕದ ಹಾಲಲ್ಲಿ ಕಸ್ತೂರಿ ಅರಿಶಿಣವನ್ನು ಕಲಸಿ ಹಚ್ಚಿದರೆ ಭಂಗು ನಿವಾರಣೆಯಾಗುತ್ತದೆ.
ಮೊಸರು ಮತ್ತು ನಿಂಬೆ ರಸವನ್ನು ಕಲಸಿ ಮುಖಕ್ಕೆ ಲೇಪಿಸಬೇಕು.
ಜೇನುತುಪ್ಪಕ್ಕೆ ಬೆಣ್ಣೆ ಕಲಸಿ ಮುಖಕ್ಕೆ ಲೇಪನ ಮಾಡಬೇಕು.
ಮೂಲಂಗಿ ರಸವನ್ನು ಮಜ್ಜಿಗೆ ಜೊತೆ ಮಿಶ್ರಣ ಮಾಡಿ ಲೇಪನ ಮಾಡಬೇಕು.
ಅರಿಶಿಣಕ್ಕೆ ರಕ್ತಚಂದನ ಮತ್ತು ಎಮ್ಮೆ ಹಾಲನ್ನು ಸೇರಿಸಿ ಮಿಶ್ರಣ ಮಾಡಿ ಹಚ್ಚಬೇಕು.
ಅಲೋವೆರಾ ತಿರುಳಿಗೆ ನಿಂಬೆ ರಸ ಬೆರೆಸಿ ಪ್ರತಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚುತ್ತಿದ್ದರೆ ಭಂಗು ನಿವಾರಣೆಯಾಗುತ್ತದೆ.