3.5 ಲಕ್ಷ ರೂ. ಚಿನ್ನಾಭರಣ ಕಳ್ಳವು!

3.5 ಲಕ್ಷ ರೂ. ಚಿನ್ನಾಭರಣ ಕಳ್ಳವು!

ಬೆಂಗಳೂರು, ಮೇ.16, ನ್ಯೂಸ್ಎಕ್ಸ್ ಪ್ರೆಸ್‍ : ದಂಪತಿ ಮನೆಯಲ್ಲಿ ಮಲಗಿರುವಾಗಲೇ ಮನೆಗೆ ನುಗ್ಗಿ ಕಳ್ಳರು ತಮ್ಮ ಕೈ ಚಳಕ ತೋರಿಸಿರುವ ಘಟನೆ ಬೆಂಗಳೂರಿ ಕೆಂಗೇರಿ ಉಪನಗರದ ಮನೆಯೊಂದರಲ್ಲಿ ನಡೆದಿದೆ. ರವಿ ಗಗನಮಾಲಿ ದಂಪತಿ ಮನೆಯಲ್ಲಿ ಮಲಗಿದ್ದರು. ಈ ವೇಳೆ ಮನೆಯ ಬಾಗಿಲು ಮೀಟಿ ಒಳನುಗ್ಗಿದ್ದ ಕಳ್ಳರು3.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಪರ್ಸನಲ್ಲಿದ್ದ 3 ಸಾವಿರ ನಗದು ಹಣವನ್ನು ಕದೊಯ್ದಿದ್ದಾರೆ. ಎಂದಿನಿಂತೆ ದಂಪತಿ ಎಚ್ಚರವಾಗಿ ನೋಡಿದಾಗ ಕಳ್ಳತನವಾಗಿದ್ದು, ಗಮನಕ್ಕೆ ಬಂದಿದೆ.ಈ ಪ್ರಕರಣ ಕುರಿತು ರವಿ ಗಗನಮಾಲಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos