ಬೆಂಗಳೂರು, ಮೇ. 15, ನ್ಯೂಸ್ ಎಕ್ಸ್ ಪ್ರೆಸ್: ಕರ್ಪೂರವನ್ನು ದೇವರ ಪೂಜೆಗೆ ಬಳಸುತ್ತಾರೆ. ಆದರೆ ಈ ಕರ್ಪೂರ ದೇವರ ಪೂಜೆಗೆ ಮಾತ್ರವಲ್ಲ, ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ. ಕರ್ಪೂರ ಹಾಗೂ ತೆಂಗಿನ ಎಣ್ಣೆಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಕಡಿಮೆಯಾಗುತ್ತದೆ.
ಒಡೆದ ಹಿಮ್ಮಡಿಗೆ ಕರ್ಪೂರ ಮದ್ದು
ಬಿಸಿ ನೀರಿಗೆ ಕರ್ಪೂರ ಸೇರಿಸಿ ಕಾಲಿನ ಹಿಮ್ಮಡಿಗಳಿಗೆ ಹಚ್ಚಿಕೊಳ್ಳುವುದರಿಂದ ಒಡೆದ ಪಾದದ ನೋವು ಕಡಿಮೆಯಾಗುತ್ತದೆ.ಕರ್ಪೂರದ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲು ಬಲಗೊಳ್ಳುತ್ತದೆ. 100 ಗ್ರಾಂ ತೆಂಗಿನ ಎಣ್ಣೆಗೆ ಚಿಟಕಿ ಕರ್ಪೂರವನ್ನು ಹಾಕಿ ಮಿಕ್ಸ್ ಮಾಡಿ ಸ್ನಾನವಾದ ನಂತರ ದೇಹಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಸುಟ್ಟ ಗಾಯದ ಕಲೆ ಅಥವಾ ಚರ್ಮದ ಮೇಲಿನ ಹಳೆ ಕಲೆ ಹೋಗಲಾಡಿಸಲು ಕರ್ಪೂರವನ್ನು ನೀರಿನಲ್ಲಿ ಒದ್ದೆ ಮಾಡಿ ಅದನ್ನು ಕಲೆಯ ಜಾಗಕ್ಕೆ ಹಚ್ಚುತ್ತಾ ಬಂದರೆ ಕಲೆ ಮಾಯವಾಗುತ್ತದೆ.