ಅಸ್ಸಾಂ, ಮೇ .14, ನ್ಯೂಸ್ ಎಕ್ಸ್ ಪ್ರೆಸ್: ಹಿಂದೂ ಮುಸ್ಲಿಂ ಅಂದ್ರೆ ಹಾವು ಮುಂಗಸಿ ಅಂತ ಕಾಣೋರೆ ಹೆಚ್ಚು.ಆದ್ರೆ ಅಸ್ಸಾಂನ ದೀಸ್‍ಪುರದಲ್ಲಿ ಮುಸ್ಲಿಂ ಯುವಕನೊಬ್ಬ ರಂಜಾನ್ ಉಪವಾಸ ಕೈಬಿಟ್ಟು ಹಿಂದೂ ಮಹಿಳೆಯೊಬ್ಬರಿಗೆ ರಕ್ತ ನೀಡಿ ಜೀವ ಉಳಿಸಿದ್ದಾರೆ.
ಘಟನೆ ನಡೆದ್ದಾದ್ರೂ ಏನು?
ದೇಶಾದ್ಯಂತ ಮುಸ್ಲಿಂಮರ ಪವಿತ್ರ ಹಬ್ಬ ರಂಜಾನ್ ಹಬ್ಬ ಆಚರಿಸಲಾಗ್ತಿದೆ. ಜಗತ್ತಿನಾದ್ಯಂತ ಮುಸ್ಲಿಂ ಬಾಂಧವರು ಕಟ್ಟಾ ಉಪವಾಸ ವೃತ ಆಚರಿಸುತ್ತಿದ್ದಾರೆ. ದೀಸ್‍ಪುರದಲ್ಲಿ ಅನಿಲ್ ಎಂಬುವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ರು. ತಾಯಿಯನ್ನು ಬದುಕಿಸಲು ರಕ್ತದ ಅವಶ್ಯಕತೆ ಇತ್ತು. ಆದ್ರೆ ಬ್ಲಡ್ ಬ್ಯಾಂಕ್‍ನಲ್ಲಿ ಅನಿಲ್ ತಾಯಿಯವರಿಗೆ ಬೇಕಾದ ಗುಂಪಿನ ರಕ್ತವಿರಲಿಲ್ಲ. ರಕ್ತ ಬೇಕು ಎಂದು ಅನಿಲ್ ಅನ್ಸಾರಿ ಅನ್ನೋರನ್ನು ಸಂಪರ್ಕ ಮಾಡಿದ್ರು. ರಂಜಾನ್ ಉಪವಾಸ ಅನ್ನೋದನ್ನು ಲೆಕ್ಕಿಸದೇ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಂದ ಅನ್ಸಾರಿ, ಅನಿಲ್ ತಾಯಿಯವರಿಗೆ ತನ್ನ ರಕ್ತ ಕೊಟ್ಟು ಜೀವ ಉಳಿಸಿದ್ದಾರೆ. ಅನ್ಸಾರಿ ಮಾನವೀಯ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.