ಬೆಂಗಳೂರು, ಮೇ.11, ನ್ಯೂಸ್ ಎಕ್ಸ್ ಪ್ರೆಸ್: ಚಿನ್ನಕ್ಕೋಸ್ಕರ ಯುದ್ಧ, ಕೊಲೆ, ಸುಲಿಗೆ, ನಡೆದಿವೆ. ಆದ್ರೆ, ಚಿನ್ನ ಎಲ್ಲೆಲ್ಲಿದೆ ಅನ್ನೋ ಅಸಲಿ ಸಂಗತಿ ಗೊತ್ತಾದ್ರೆ ನೀವು ನಿಜಕ್ಕೂ ಶಾಕ್ ಆಗ್ತೀರಿ… ನಮ್ಮ ದೇಹದಲ್ಲೇ ಚಿನ್ನ ಇದೆ. ಚಿನ್ನ ಅನ್ನೋ ಹಳದಿ ಲೋಹಕ್ಕಿರೋ ಬೆಲೆ ಸಾಮಾನ್ಯ ಮನುಷ್ಯನಿಗಿಲ್ಲ.
ಮನುಷ್ಯರೊಳಗೆ ಚಿನ್ನದ ಅಂಶ ಇದೆ ಅನ್ನುತ್ತೆ ವಿಜ್ಞಾನ. ಅಷ್ಟಕ್ಕೂ ನಮ್ಮ ದೇಹದಲ್ಲಿ ಎಷ್ಟು ಚಿನ್ನ ಸಿಗುತ್ತೆ ಗೊತ್ತಾ? 0. 2 ಮಿಲಿ ಗ್ರಾಮ್, ಅದ್ರಲ್ಲೂ ಬಹುಪಾಲು ಚಿನ್ನದ ಅಂಶ ರಕ್ತದಲ್ಲೇ ಅಡಗಿರುತ್ತೆ. 70 ಕೆಜಿ ತೂಗುವ ಮನುಷ್ಯನ ದೇಹದಲ್ಲಿ 0.2 ಮಿಲಿ ಗ್ರಾಮ್ ಚಿನ್ನ ಇರುತ್ತೆ. ನಮ್ಮ ದೇಹದ ತೂಕದಲ್ಲಿ 0.000000003% ನಷ್ಟು ಚಿನ್ನ ಅಡಗಿರುತ್ತದೆ. 5000 ಜನರ ದೇಹದಲ್ಲಿರೋ ಚಿನ್ನವನ್ನು ಗುಡ್ಡೆ ಹಾಕಿದ್ರಷ್ಟೇ ಒಂದು ಗ್ರಾಮ್ ಚಿನ್ನ ಸಿಗೋದು. ರಕ್ತವನ್ನು ಬಿಟ್ರೆ ಹೃದಯದೊಳಗೂ ಚಿನ್ನದ ಅಂಶ ಅಡಗಿರುತ್ತದೆ. ಮನುಷ್ಯನ ದೇಹದಲ್ಲಿ ಚಿನ್ನ ಇದೆ. ಮನುಷ್ಯನ್ನೂ ಗಣಿಗಾರಿಕೆ ಮಾಡೋಕಾಗಲ್ಲ.ದೇಹದ ಆರೋಗ್ಯಕ್ಕೆ ಚಿನ್ನವೂ ಮುಖ್ಯವಾಗುತ್ತೆ.