ನವದೆಹಲಿ, ಮೇ.11, ನ್ಯೂಸ್ ಎಕ್ಸ್ ಪ್ರೆಸ್: 72 ವರ್ಷದ ಐಟಿಸಿ ಅಧ್ಯಕ್ಷ ವೈ ಸಿ ದೇವೇಶ್ವರ್ ಅವರು ಇಂದು ಬೆಳಿಗ್ಗೆ ನಿಧನ ಹೊಂದಿದರು.
1947ರ ಫೆ. 4ರಂದು ಪಾಕಿಸ್ಥಾನದ ಲಾಹೋರ್ ನಲ್ಲಿ ಜನಿಸಿದ್ದ ದೇವೇಶ್ವರ್, ದಿಲ್ಲಿ ಐಐಟಿ ಮತ್ತು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನ ಹಳೆ ವಿದ್ಯಾರ್ಥಿ. ಇವರು 1968ರಲ್ಲಿ ಐಟಿಸಿ ಸೇರಿದ್ದರು.
1984ರ ಏ. 11ರಂದು ದೇವೇಶ್ವರ್ ಅವರನ್ನು ಐಟಿಸಿ ಆಡಳಿತ ಮಂಡಳಿಗೆ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. 1996ರ ಜನವರಿ 1ರಂದು ಅವರು ಕಂಪೆನಿಯ ಚೀಫ್ ಎಕ್ಸಿಕ್ಯುಟಿವ್ ಮತ್ತು ಚೇರ್ಮನ್ ಆದರು.
2 ದಶಕಗಳಿಗೂ ಮೀರಿದ ಅವಧಿಗೆ ಐಟಿಸಿಯ ಉನ್ನತ ಹುದ್ದೆಯನ್ನು ಅಲಂಕರಿಸಿರುವ ದೇವೇಶ್ವರ್ ಅವರು ಭಾರತದಲ್ಲಿ ಅತಿ ದೀರ್ಘ ಕಾಲ ಕಾರ್ಪೊರೇಟ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರಲ್ಲಿ ಒಬ್ಬರಾಗಿದ್ದಾರೆ. 2017ರ ಫೆ. 4ರ ವರೆಗೂ ಅವರು ಐಟಿಸಿ ಚೇರ್ಮನ್ ಮತ್ತು ಚೀಫ್ ಎಕ್ಸಿಕ್ಯುಟಿವ್ ಆಗಿದ್ದರು.