ತಿಮ್ಮಪ್ಪನ ದರ್ಶನ ಪಡೆದ ರೋಹಿತ, ಕಾರ್ತಿಕ್ !

ತಿಮ್ಮಪ್ಪನ ದರ್ಶನ ಪಡೆದ ರೋಹಿತ, ಕಾರ್ತಿಕ್ !

ತಿರುಪತಿ , ಮೇ.10, ನ್ಯೂಸ್ ಎಕ್ಸ್ ಪ್ರೆಸ್ : ಟೀಂ ಇಂಡಿಯಾ  ರೋಹಿತ್ ಶರ್ಮಾ, ಐಪಿಎಲ್ ಫೈನಲ್ ಪಂದ್ಯಕ್ಕೂ ಮೊದಲು ಕುಟುಂಬ ಹಾಗು ಸ್ನೇಹಿತರ ಜೊತೆ ತಿರುಮಲದ ಶ್ರೀ ವೆಂಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಸ್ವಾಮಿಯ ಆಶೀರ್ವಾದ ಪಡೆದಿದ್ದಾರೆ. ರೋಹಿತ್ ಶರ್ಮಾ ಕುಟುಂಬಕ್ಕಾಗಿ ಪ್ರತ್ಯೇಕ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ರೋಹಿತ್ ಶರ್ಮಾ ಪತ್ನಿ ಸಮೇತ  ತಿಮ್ಮಪ್ಪನ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಟೀಂ ಇಂಡಿಯಾ ವಿಕೆಟ್ ಕೀಪರ್  ದಿನೇಶ್ ಕಾರ್ತಿಕ್ ಸಹ ತಿರುಮಲಕ್ಕೆ ಭೇಟಿ ತಿಮ್ಮಪ್ಪನ ದರ್ಶನ ಪಡೆದ್ರು.  ಐಪಿಎಲ್ ನಲ್ಲಿ ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್,  ಫೈನಲ್ ಪ್ರವೇಶಿಸಿದೆ.  ಸಿಎಸ್ ಕೆ ಮತ್ತು  ಕ್ಯಾಪಿಟಲ್ಸ್ ನಡುವೆ ಇಂದು ನಡೆಯುವ 2ನೇ  ಕ್ವಾಲಿಫೈಯರ್ ಪಂದ್ಯದಲ್ಲಿ  ಟ್ರೋಫಿಗಾಗಿ ಕಾದಾಟ ನಡೆಸಲಿದೆ.  ದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತ್ತಾ ನೈಟ್ರೈಡರ್ಸ್ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದಿದ್ದೆ. ಇದೇ ತಿಂಗಳು 30 ರಿಂದ ಇಂಗ್ಲೆಂಡ್ ನಲ್ಲಿ ಆರಂಭವಾಗಲಿರೋ, ಏಕದಿನ ವಿಶ್ವಕಪ್ ಟೂರ್ನಿಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos